twitter
    For Quick Alerts
    ALLOW NOTIFICATIONS  
    For Daily Alerts

    ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ 'ಸೂಪರ್' ಚಿತ್ರ ಪ್ರದರ್ಶನ

    By Rajendra
    |

    ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಸೂಪರ್' ಚಿತ್ರ ಈಗಾಗಲೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಇತ್ತೀಚೆಗೆ ಈ ಚಿತ್ರದ ಪ್ರದರ್ಶನವನ್ನು ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಏರ್ಪಡಿಸಲಾಗಿತ್ತು. ಸಾವಿರಾರು ಇನ್ಫೋಸಿಸ್ ಉದ್ಯೋಗಿಗಳು ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಭಾರತದ ಭವಿಷ್ಯದ ಬಗೆಗಿನ ಉಪ್ಪಿ ಕಲ್ಪನೆ ಬಗ್ಗೆ ಪ್ರೇಕ್ಷಕರು ಮನಸೋತಿದ್ದಾರೆ.

    ಚಿತ್ರವನ್ನು ನೋಡಿದ ಕನ್ನಡೇತರ ಇನ್ಫಿ ಉದ್ಯೋಗಿಗಳು ಉಪೇಂದ್ರ ನಟನೆ, ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ತಾಂಡವವಾಡುತ್ತಿರುವ ಲಂಚಾವತಾರ, ಭ್ರಷ್ಟಾಚಾರದಂತಹ ಪ್ರಚಲಿತ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಉಪ್ಪಿ ಉತ್ತಮ ಸಂದೇಶಾತ್ಮಕ ಚಿತ್ರ ನೀಡಿದ್ದಾರೆ ಎಂದಿದ್ದಾರೆ.

    "ಮೈಸೂರಿನ ಇನ್ಫಿ ಉದ್ಯೋಗಿಗಳಿಂದ ಚಿತ್ರ ಪ್ರದರ್ಶನಕ್ಕೆ ಬೇಡಿಕೆ ಬಂದಿತ್ತು. ಹಾಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದೆವು. ಅಚ್ಚರಿ ಎಂಬಂತೆ ಕನ್ನಡೇತರ ಪ್ರೇಕ್ಷಕ ವರ್ಗದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ" ಎಂದು ಉಪೇಂದ್ರ ತಿಳಿಸಿದ್ದಾರೆ. ಕನ್ನಡೇತರರಿಗೂ ಚಿತ್ರದ ಸಂದೇಶ ತಲುಪಿರುವ ಬಗ್ಗೆ ಉಪೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರುನ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆ ಐಐಎಂ ಹಾಗೂ ಚೆನ್ನೈನ ಐಐಟಿ ವಿದ್ಯಾರ್ಥಿಗಳನ್ನೂ ಭೇಟಿ ಮಾಡಿದ್ದೇವೆ. ಆಯಾ ಕ್ಯಾಂಪಸ್‌ಗಳಲ್ಲೂ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳುವ ಸಿದ್ಧತೆ ನಡೆಸಿದ್ದೇವೆ ಎಂದು ಉಪೇಂದ್ರ ವಿವರ ನೀಡಿದ್ದಾರೆ.

    ಈಗಾಗಲೆ ಐಐಟಿ ಚೆನ್ನೈ ಮತ್ತು ಐಐಎಂ ಬೆಂಗಳೂರಿನ ಕೆಲವು ವಿದ್ಯಾರ್ಥಿಗಳು ಚಿತ್ರವನ್ನು ನೋಡಿದ್ದಾರೆ. ಆಯಾ ಕ್ಯಾಂಪಸ್‌ನಲ್ಲಿರುವ ಕನ್ನಡೇತರ ವಿದ್ಯಾರ್ಥಿಗಳು ಹೇಗೆ ಸ್ಪಂದಿಸುತ್ತಾರೆ ಎಂಬ ಕುತೂಹಲ ನನಗೂ ಇದೆ ಎಂದಿದ್ದಾರೆ ಉಪೇಂದ್ರ. ಒಟ್ಟಿನಲ್ಲಿ ಉಪೇಂದ್ರ 'ಸೂಪರ್' ಕ್ಯಾಂಪಸ್‌ನಲ್ಲಿ ಹೊಸ ಕಲರವಕ್ಕೆ ಕಾರಣವಾಗಿದೆ.

    English summary
    Real Star Upendra directed and acted Kannada block buster movie Super film show has arranged in Infosys Mysore campus. The employees enjoyed its innovative presentation. Meanwhile Upendra had met several people who are presently studying in IIM, Bengaluru and IIT Chennai who were keen to see the film in their campuses.
    Wednesday, February 2, 2011, 13:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X