»   » ವರ್ಷಧಾರೆಯಲ್ಲಿ ಬ್ರಹ್ಮಚಾರಿ ಹೋದ ಜಾರಿ

ವರ್ಷಧಾರೆಯಲ್ಲಿ ಬ್ರಹ್ಮಚಾರಿ ಹೋದ ಜಾರಿ

Subscribe to Filmibeat Kannada
Varshadhare Hero Mithun Tejaswi
ಚಿತ್ರಸಾಹಿತಿ ಡಾ.ನಾಗೇಂದ್ರಪ್ರಸಾದ್ ಅವರ ಅಂದಿನ ಪ್ರಸಿದ್ದ ಹಾಡು 'ಬೇಡ ನಂಬಬೇಡ' ಎಂಬ ಗೀತೆ ನೆನಪಾಗುವಂತೆ ತಮ್ಮದೇ ಶೈಲಿಯಲ್ಲಿ ಬ್ರಹ್ಮಚಾರಿಯನ್ನು ಅಕ್ಷರಗಳಿಂದ ಅಂಲಂಕರಿಸಿದ್ದಾರೆ. ಪಿ.ರಾಮಸ್ವಾಮಿ ಹಾಗೂ ಸಂಧ್ಯಾವೆಂಕಟೇಶ್ ನಿರ್ಮಿಸುತ್ತಿರುವ 'ವರ್ಷಧಾರೆ' ಚಿತ್ರಕ್ಕೆ ನಾಗೇಂದ್ರ ಪ್ರಸಾದ್.

'ಮಹಾಬ್ರಹ್ಮಚಾರಿ ಹೋದಹೋದ ಜಾರಿ'ಎಂಬ ಗೀತೆಯನ್ನು ರಚಿಸಿದ್ದಾರೆ. ರಾಮು ನೃತ್ಯನಿರ್ದೇಶನದಲ್ಲಿ ಕಾರವಾರ, ಅಂಕೋಲ, ಕುಮುಟಾ ಸುತ್ತಮುತ್ತ ಚಿತ್ರೀಕೃತವಾದ ಈ ಗೀತೆಗೆ ಸೂರಜ್ ಹಾಗೂ ಪಾಯಲ್‌ಘೋಷ್ ಹೆಜ್ಜೆಹಾಕಿದ್ದನ್ನು ನಿರ್ದೇಶಕ ವೇಮಗಲ್‌ಜಗನ್ನಾಥ್‌ರಾವ್ ಚಿತ್ರೀಕರಿಸಿಕೊಂಡರು. ನಿರ್ದೇಶಕರು ವೆಂಕಟೇಶ್ ಅವರೊಡಗೂಡಿ ಚಿತ್ರಕ್ಕೆ ಕತೆ ರಚಿಸಿದ್ದಾರೆ.

ದೇವರಾಜ್ ಛಾಯಾಗ್ರಹಣವಿರುವ 'ವರ್ಷಧಾರೆ'ಗೆ ಅಜನೀಶ್‌ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಿಥುನ್‌ತೇಜಸ್ವಿ, ಸೂರಜ್, ಪಾಯಲ್‌ಘೋಷ್, ಆಶಿಟ್ಯಾಗೂರ್, ರಾಂಪ್ರಸಾದ್, ಸಂತೋಷ್, ನಿಶಾ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.ವರ್ಷಧಾರೆಗೆ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಸಹ ಹಾಡುಗಳನ್ನು ರಚಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada