ಪೂಜಾ ಗಾಂಧಿಗೆ ಸೂಕ್ತ ಕನ್ನಡ ವರ ಬೇಕಾಗಿದೆ

By Rajendra

ನಟಿ ಪೂಜಾ ಗಾಂಧಿ ಒಲವಿನ ಪೂಜಾ ಫಲ ಫಲಿಸಿದೆ. ಆಕೆ ಇದೇ ಮೊದಲ ಬಾರಿಗೆ ತನ್ನ ಮದುವೆ ಬಗ್ಗೆ ತುಟಿಬಿಚ್ಚಿದ್ದಾರೆ. ತಾನು ಮದುವೆಯಾಗುವ ಹುಡುಗ ಕರ್ನಾಟಕದವನೇ ಆಗಿರಬೇಕು, ಕನ್ನಡ ಬಲ್ಲವನಾಗಿರಬೇಕು ಎಂದು ತನ್ನ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ.

ಸದ್ಯಕ್ಕೆ ಪೂಜಾಗಾಂಧಿ ಪೋಷಕರು ವರನ ಹುಡುಕಾಟದಲ್ಲಿದ್ದಾರೆ. ತಾನು ಮದುವೆಯಾಗುವ ಹುಡುಗ ಒಳ್ಳೆಯ ಮನಸ್ಸಿನವನಾಗಿರಬೇಕು. ನನ್ನ ವೃತ್ತಿಯನ್ನು ಗೌರವಿಸಬೇಕು. ಅವಿಭಕ್ತ ಕುಟುಂಬದಲ್ಲಿ ನಂಬಿಕೆ ಇರಬೇಕು ಎಂದು ತನ್ನವನ ಬಗ್ಗೆ ಹೃದಯ ಬಿಚ್ಚಿ ಹೇಳಿಕೊಂಡಿದ್ದಾರೆ.

ಮನಮೆಚ್ಚಿದ ಹುಡುಗನ ಹುಡುಕಾಟದಲ್ಲಿರುವ ಪೂಜಾಗಾಂಧಿ, ಈ ಎಲ್ಲಾ ಗುಣಗಳಿರುವ ಹುಡುಗ ಸಿಕ್ಕಿದ ಕೂಡಲೆ ಮಾಂಗಲ್ಯಂ ತಂತು ನಾನೇನಾ. ಶೀಘ್ರದಲ್ಲೆ ಪೂಜಾಗಾಂಧಿ ಮೆಚ್ಚಿದ ಹುಡುಗ ಸಿಗಲಿ ಎಂಬ ಶುಭ ಹಾರೈಕೆ ಅಭಿಮಾನಿಗಳ ಕಡೆಯಿಂದ ಇದ್ದೇ ಇದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
At Very first time Kannada actress Pooja Gandhi announced on her marriage. She wants a boy from Karnataka – a Kannada speaking guy.Kannada language has become very comfortable she has pointed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X