ಸೂರಿ ಜೊತೆ ಯೋಗರಾಜ್ ಭಟ್ ಅಣ್ಣಾಬಾಂಡ್ ವೀಕ್ಷಣೆ

ಈ ಕುರಿತು ಮಾತನಾಡಿರುವ ಯೋಗರಾಜ್ ಭಟ್, "ನಿನ್ನೆ ನಾನು ಕೆಲವು ರೀರೆಕಾರ್ಡಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದೆ. ಹಾಗಾಗಿ ಅಣ್ಣಾಬಾಂಡ್ ವೀಕ್ಷಿಸಲು ನನಗೆ ಸಾಧ್ಯವಾಗಲೇ ಇಲ್ಲ. ಆದರೆ ಇಂದು ನಾನು ಗೆಳೆಯ ಸೂರಿ ಜೊತೆ ಖಂಡಿತವಾಗಿಯೂ ಚಿತ್ರ ವೀಕ್ಷಿಸಲಿದ್ದೇನೆ" ಎಂದಿದ್ದಾರೆ. ಯೋಗರಾಜ್ ಭಟ್ ಅವರಿಗೆ ಸ್ಪೆಷಲ್ ಚಿತ್ರವೀಕ್ಷಣೆಗೆ ಅವಕಾಶ ಮಾಡಲಾಗಿದೆ ಎಂಬ ಮಾತೂ ಕೇಳಿಬರುತ್ತಿದೆ.
ನಿನ್ನೆ ಬಿಡುಗಡೆಯಾಗಿರುವ ಅಣ್ಣಾಬಾಂಡ್ ಗೆ ರಾಜ್ಯದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುನೀತ್ ಜೊತೆ ಪ್ರಿಯಾಮಣಿ ಹಾಗೂ ನಿಧಿ ಸುಬ್ಬಯ್ಯ ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಚೆನ್ನಾಗಿದೆ ಎಂಬ ವರದಿ ಬಂದಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Yograj Bhat, who is a close friend of Suri, will be watching Puneet Rajkumar starrer Anna Bond today, on 02 May 2012, at a special screening.
ಯೋಗರಾಜ್ ಭಟ್ ಪುನೀತ್ ರಾಜ್ ಕುಮಾರ್ ದುನಿಯಾ ಸೂರಿ ಅಣ್ಣಾಬಾಂಡ್ yogaraj bhat puneeth rajkumar duniya suri annabond


Click it and Unblock the Notifications











