»   » ನಂದಿತಾ ದಾಸ್ ಮತ್ತೆ ಕನ್ನಡದಲ್ಲಿ ನಟಿಸಲಿದ್ದಾರೆಯೇ?

ನಂದಿತಾ ದಾಸ್ ಮತ್ತೆ ಕನ್ನಡದಲ್ಲಿ ನಟಿಸಲಿದ್ದಾರೆಯೇ?

Subscribe to Filmibeat Kannada

ಹಿಂದಿಯ ಶಬಾನಾ ಅಜ್ಮಿ ಮತ್ತು ಸ್ಮಿತಾ ಪಾಟೀಲ್ ನಂತರ ಬಾಲಿವು‌ಡ್‌ನಲ್ಲಿ ಕೇಳಿಬರುವ ಹೆಸರು ನಂದಿತಾ ದಾಸ್. ಅಂತಾರಾಷ್ಟ್ರೀಯ ಖ್ಯಾತಿಯ ದೀಪಾ ಮೆಹ್ತಾ ನಿರ್ದೇಶನದ 'ಫೈರ್' ಮತ್ತು 'ಅರ್ಥ್' ಚಿತ್ರಗಳಲ್ಲಿ ಅತ್ಯಂತ ಬೋಲ್ಡಾಗಿ ನಟಿಸಿ ವಿಶ್ವದ ಗಮನ ಸೆಳಿದಿದ್ದ ನಂದಿತಾ ಈಗ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹಾರಾಡುತ್ತಿದೆ.

ಸಮಾನಾಂತರ ಚಿತ್ರಗಳಲ್ಲೇ ತನ್ನತನವನ್ನು ಕಂಡುಕೊಂಡಿರುವ 'ಕಪ್ಪು ಸುಂದರಿ' ನಂದಿತಾ ದಾಸ್ ಕನ್ನಡ ಚಿತ್ರ 'ತಬ್ಬಲಿ'ಯಲ್ಲಿ ನಟಿಸುತ್ತಾರೆ ಎಂದು ಚಿತ್ರದ ನಿರ್ಮಾಪಕರು ಹೇಳುತ್ತಿದ್ದಾರೆ. ಈ ಚಿತ್ರವನ್ನು ಎನ್. ಲೋಕಿ ನಿರ್ದೇಶಿಸುತ್ತಿದ್ದು, ಹರೂನ್ ಎಚ್.ಎಸ್. ನಿರ್ಮಿಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಮಲಯಾಳಂ, ಹಿಂದಿ, ಓರಿಯಾ, ತೆಲುಗು, ತಮಿಳು, ಇಂಗ್ಲಿಷ್, ಮರಾಠಿ, ಗುಜರಾತಿ, ಬಂಗಾಳಿ ಭಾಷೆಯ ಚಿತ್ರಗಳಲ್ಲಿ ಮುಳುಗಿಹೋಗಿದ್ದ ನಟಿ ಈಗ ಪ್ರಥಮ ಬಾರಿಗೆ ನಿರ್ದೇಶನದ ಕೈಚಳಕ ತೋರಿಸಲು ಅಣಿಯಾಗಿದ್ದಾರೆ.

'ಇನ್ ಸಚ್ ಟೈಮ್ಸ್' ಎಂಬ ಚಿತ್ರವನ್ನು ಅವರು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಂದಿತಾ ನಿರ್ದೇಶಿಸುತ್ತಿದ್ದು ಬಾಲಿವುಡ್‌ನ ಘಟಾನುಘಟಿ ನಟರಾದ ನಾಸಿರುದ್ದಿನ್ ಷಾ, ಪರೇಶ್ ರಾವಲ್ ಮತ್ತು ಸಂಜಯ್ ಸೂರಿ ಇದರಲ್ಲಿ ನಟಿಸುತ್ತಿದ್ದಾರೆ. ತಬ್ಬಲಿಯಲ್ಲಿ ನಟಿಸುತ್ತಾರೆ ಎಂದು ನಿರ್ಮಾಪಕರು ಹೇಳುತ್ತಿದ್ದರೂ ತಮ್ಮದೇ ನಿರ್ದೇಶನದ ಚಿತ್ರದಲ್ಲಿ ಅವರು ಕಳೆದುಹೋಗಿರುವುದರಿಂದ ಕನ್ನಡ ಚಿತ್ರದಲ್ಲಿ ಅವರು ನಟಿಸುವ ಸಾಧ್ಯತೆಗಳಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಇಲ್ಲಿಯವರೆಗೆ ನಂದಿತಾರಿಂದ ಯಾವುದೇ ಗ್ರೀನ್ ಸಿಗ್ನಲ್ ಬಂದ ಹಾಗಿಲ್ಲ.

ಕವಿತಾ ಲಂಕೇಶ್ ನಿರ್ದೇಶಿಸಿದ್ದ 'ದೇವೀರಿ' ಚಿತ್ರದಲ್ಲಿ ನಟಿಸಿದ ಎಂಟು ವರ್ಷಗಳ ನಂತರ ನಂದಿತಾ ಮತ್ತೆ ಈಕಡೆ ತಲೆ ಹಾಕಿರಲಿಲ್ಲ. 1999ರಲ್ಲಿ ಬಿಡುಗಡೆಯಾಗಿದ್ದ ದೇವೀರಿಯಲ್ಲಿ ನಂದಿತಾ ದೇವೀರಿ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ್ದರು. ನಂದಿತಾ ಮನೋಜ್ಞ ಅಭಿನಯದ ಚಿತ್ರ ಅನೇಕ ಪನೋರಮಾಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳ ಕೊಳ್ಳೆ ಹೊಡೆದಿತ್ತು.

ಎಷ್ಟೇ ಬಿಜಿಯಾಗಿದ್ದರೂ ತಮ್ಮ ಚಿತ್ರದಲ್ಲಿ ನಟಿಸೇ ನಟಿಸುತ್ತಾರೆ ಎನ್ನುವ ಆಶಯ ತಬ್ಬಲಿ ಚಿತ್ರ ನಿರ್ಮಾಪಕರದ್ದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada