»   » ಸಮಾಜಸೇವೆಯಾಂದಿಗೆ ಹೊಸ ವರ್ಷಕ್ಕೆ ಸ್ವಾಗತ

ಸಮಾಜಸೇವೆಯಾಂದಿಗೆ ಹೊಸ ವರ್ಷಕ್ಕೆ ಸ್ವಾಗತ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಹೊಸ ವರ್ಷವನ್ನು ಚೆನ್ನಾಗಿ ಸೆಲೆಬ್ರೇಟ್‌ ಮಾಡಿದಿರಾ ? ಇದು ಮಾಮೂಲಿ ಪ್ರಶ್ನೆ.
ಇದೇ ಪ್ರಶ್ನೆಯನ್ನು ಸ್ವಲ್ಪ ಬದಲಿಸಿದರೆ- ನಿಮ್ಮನ್ನು ಹೊಸ ವರ್ಷ ಹೇಗೆ ಬರಮಾಡಿಕೊಂಡಿತು ? ಎಂದಾಗುತ್ತದೆ. ಹೊಸ ವರ್ಷ ಒಬ್ಬೊಬ್ಬರಿಗೆ ಒಂದೊಂದು ಬಗೆ. ಸಂಕಲ್ಪ ನಿರ್ಣಯಗಳಿಗೂ ಹೊಸ ವರ್ಷ ನೆಪ ಒದಗಿಸುತ್ತದೆ. ಕೆಲವರಿಗೆ ಹೊಸ ಅವಕಾಶಗಳೂ ಹುಡುಕಿಕೊಂಡು ಬರುತ್ತವೆ. ಬಾಲಿವುಡ್‌ ತಾರೆ ರವೀನಾ ಟಂಡನ್‌ ಅವರನ್ನೇ ನೋಡಿ; ಅವರನ್ನು ಸಮಾಜ ಸೇವಾ ಕ್ಷೇತ್ರ ಸ್ವಾಗತಿಸಿದೆ.

ಅಗ್ನಿ ವರ್ಷ ಚಿತ್ರದಲ್ಲಿ ನಾಗಾರ್ಜುನ ಜೊತೆಗೆ ‘ಸೆಕ್ಸೀ ಕಮ್‌ ಆರ್ಟ್‌’ ರೋಲ್‌ ಮಾಡಿದ ರವೀನಾ ಆಮೇಲೆ ಸುದ್ದಿಮನೆಯಿಂದ ಮಾಯವಾಗಿ ತಣ್ಣಗಿದ್ದರು. ಸುದ್ದಿ ಮಾಡುವುದಕ್ಕೆ ಅವರಿಗೆ ಪುರುಸೊತ್ತೂ ಇರಲಿಲ್ಲ. ಅವರು ಬ್ಯುಸಿಯಾಗಿದ್ದುದು ಬಾಲಿವುಡ್‌ನಲ್ಲಿ ಅಂತ ನೀವಂದು ಕೊಂಡರೆ.. ತಪ್ಪು ತಪ್ಪು. ಅವರ ಅಂತರಂಗದ ಆಸೆ ಸಮಾಜ ಸೇವೆ ; ಆ ಸೇವೆಯಲ್ಲೇ ರವೀನಾ ಬಿಡುವು ಕಳಕೊಂಡಿದ್ದರು.

ರವೀನಾ ಪಾಲಿಗೆ ಸಮಾಜ ಸೇವೆಯ ಜವಾಬ್ದಾರಿಯಾಂದಿಗೇ ಹೊಸ ವರ್ಷ ಆರಂಭವಾಗಿದೆ. 2003ನೇ ವರ್ಷದ ಮಕ್ಕಳ ರಾಯಭಾರಿಯಾಗಿ ರವೀನಾ ಟಂಡನ್‌ ಆಯ್ಕೆಯಾಗಿರುವುದಾಗಿ ಚೈಲ್ಡ್‌ ರಿಲೀಫ್‌ ಆ್ಯಂಡ್‌ ಯು (ಕ್ರೆೃ) ಸಂಸ್ಥೆ ಘೋಷಿ ಸಿದೆ. ಅಡಿಷನಲ್‌ ಖುಷಿಯೆಂದರೆ ಅವರದು ಅವಿರೋಧ ಆಯ್ಕೆ.

ಬಾಲಿವುಡ್‌ಗೆ ಸಣ್ಣ ನಡುವಿನ ಹೊಸ ಹುಡುಗಿಯರ ದಾಳಿ ಶುರುವಾಗುತ್ತಲೇ, ರವೀನಾ ಹೆಚ್ಚು ವಯಸ್ಸಾದವರಂತೆ ಕಾಣಿಸತೊಡಗಿದರು. ಮದುವೆ, ಗಂಡ, ಮಕ್ಕಳು ಎಂಬ ಸಂಸಾರದ ಬಂಧನದತ್ತ ಹೊರಳದೆ ಆಧ್ಯಾತ್ಮ, ಯೋಗಗಳ ವಿಚಾರವನ್ನು ಹೇರಿಕೊಂಡು ಸಮಾಜ ಸೇವೆಯತ್ತ ಮುಖ ಮಾಡಿದ್ದ ರವೀನಾ ಕಳೆದೆರಡು ತಿಂಗಳಿನಿಂದ ಕ್ರೆೃ ಸಂಸ್ಥೆ ಜೊತೆಗೆ ಕೈ ಜೋಡಿಸಿದ್ದರು.

2003 ನೇ ವರ್ಷದಲ್ಲಿ ರವೀನಾರ ನಿರ್ಣಯಗಳು ಪಟ್ಟಿಯಲ್ಲಿ ಸಮಾಜ ಸೇವೆಗೆ ಮೊದಲ ಸ್ಥಾನ. ಅವರು ವರ್ಷ ಪೂರ್ತಿ ಕ್ರೆೃ ಸಂಸ್ಥೆಯ ಜೊತೆಗೆ ಬ್ಯುಸಿಯಾಗಿರುತ್ತಾರೆ. ದೇಶಾದ್ಯಂತ ನಿಧಿ ಸಂಗ್ರಹಣ ಕಾರ್ಯಕ್ರಮಗಳನ್ನು ನೀಡುತ್ತಾರೆ.

ಈ ಹಿಂದೆಯೂ ರವೀನಾ ಅನಾಥ ಮಕ್ಕಳ ಬಗೆಗೆ ಕಾಳಜಿ ವ್ಯಕ್ತಪಡಿಸಿದ್ದಿದೆ. ಕ್ವಾಲಿಟಿ ಇನ್‌ಸ್ಟಿಟ್ಯೂಷನಲ್‌ ಕೇರ್‌ ಫಾರ್‌ ಚಿಲ್ಡ್ರನ್‌ ಎಂಬ ಸಂಸ್ಥೆಯಾಂದಿಗೆ ಮಕ್ಕಳ ಹಕ್ಕಿನ ಬಗ್ಗೆ ಜನಜಾಗೃತಿ ಮೂಡಿಸಲು ಯತ್ನಿಸಿದ್ದರು. ಪ್ರತಿ ಮಗುವಿಗೂ ಉತ್ತಮ ಕೌಟುಂಬಿಕ ವಾತಾವರಣದಲ್ಲಿ ಬದುಕುವ ಹಕ್ಕಿದೆ ಎಂಬ ಘೋಷಣೆಯನ್ನು ಕೈಗೆತ್ತಿಕೊಂಡಿದ್ದರು. ಹೆಣ್ಣು ಮಗುವನ್ನು ರಕ್ಷಿಸಿ ಎಂಬ ಇನ್ನೊಂದು ಆಂದೋಳನವನ್ನೂ ರವೀನಾ ಬೆಂಬಲಿಸಿದ್ದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada