»   » ನಗರದಲ್ಲಿ ಅಮೀರ್‌ಖಾನ್‌-ಕಿರಣ್‌ ರಾವ್‌ ಆರತಕ್ಷತೆ

ನಗರದಲ್ಲಿ ಅಮೀರ್‌ಖಾನ್‌-ಕಿರಣ್‌ ರಾವ್‌ ಆರತಕ್ಷತೆ

Posted By:
Subscribe to Filmibeat Kannada

ಬೆಂಗಳೂರು : ಇತ್ತೀಚೆಗೆ ಮದುವೆಯಾದ ಬಾಲಿವುಡ್‌ನಟ ಅಮೀರ್‌ಖಾನ್‌ ಮತ್ತು ಕಿರಣ್‌ರಾವ್‌ಅವರ ಆರತಕ್ಷತೆ ಸಮಾರಂಭ, ಸೋಮವಾರ ನಗರದಲ್ಲಿ ಸರಳವಾಗಿ ನೆರವೇರಿತು.

ಭಾರೀ ಪೊಲೀಸ್‌ ಭದ್ರತೆ ನಡುವೆ ಬೆಂಗಳೂರು ಕ್ಲಬ್‌ನಲ್ಲಿ ನಡೆದ ಈ ಸಮಾರಂಭದಲ್ಲಿ , ಅತಿಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸಮಾರಂಭದಲ್ಲಿ ಕಪ್ಪು ಬಣ್ಣದ ಸೂಟ್‌ ಮತ್ತು ಆಕಾಶ ನೀಲಿ ವರ್ಣದ ಶರ್ಟ್‌ನಲ್ಲಿ ಅಮೀರ್‌ಖಾನ್‌, ಶ್ವೇತ ವರ್ಣದ ಸೀರೆ ಧರಿಸಿದ್ದ ಕಿರಣ್‌ಎಲ್ಲರ ಗಮನ ಸೆಳೆದಿದ್ದರು.

ರೀನಾ ದತ್‌ಗೆ ವಿಚ್ಛೇಧನ ನೀಡಿ, ಕಿರಣ್‌ ರಾವ್‌ ಜೊತೆ ಇತ್ತೀಚೆಗಷ್ಟೇ ಅಮೀರ್‌ಖಾನ್‌ಮದುವೆಯಾಗಿದ್ದಾರೆ. ಅವರಿಗೆ ಎರಡು ಮಕ್ಕಳೂ ಇವೆ. ‘ಲಗಾನ್‌’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಹಾಯಕ ನಿರ್ದೇಶಕಿ ಕಿರಣ್‌ ಜೊತೆ, ಅಮೀರ್‌ ಸ್ನೇಹ ಬೆಳೆದು, ಅದು ಪ್ರೇಮವಾಗಿ, ಮದುವೆಯಲ್ಲಿ ಅಂತ್ಯಗೊಂಡಿದೆ.

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada