»   » ಅಪಘಾತದಲ್ಲಿ ಸುದೀಪ್‌ಗೆ ಗಾಯ

ಅಪಘಾತದಲ್ಲಿ ಸುದೀಪ್‌ಗೆ ಗಾಯ

Posted By: Staff
Subscribe to Filmibeat Kannada
Sudeep
ಸುದೀಪ್‌ ಅಪಾಯದಿಂದ ಪಾರಾಗಿದ್ದಾರೆ !'ರಂಗ ಎಸ್‌ಎಸ್‌ಎಲ್‌ಸಿ" ಕನಸು ಕಾಣುತ್ತಿರುವ ನಟ ಸುದೀಪ್‌ಗೆ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಫೆ.1 ಭಾನುವಾರ ರಾತ್ರಿ 12ರ ಸುಮಾರಿಗೆ ಈ ಅವಘಡ ಸಂಭವಿಸಿದೆ.

ರೆಸ್ಟೋರೆಂಟ್‌ ಮುಂಭಾಗದಲ್ಲಿ ಗೆಳೆಯರೊಂದಿಗೆ ಸುದೀಪ್‌ ಉಪಾಹಾರ ಸೇವಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾವೇರಿ ಹ್ಯಾಂಡಿಕ್ರಾಫ್ಟ್ಸ್‌ ಕಡೆಯಿಂದ ವೇಗವಾಗಿ ಬಂದ ಕಾರೊಂದು ರೆಸ್ಟೋರೆಂಟ್‌ ಮುಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು , ಈ ವಾಹನಗಳು ಬಲವಾಗಿ ತಗುಲಿ ಸುದೀಪ್‌ ಹಾಗೂ ಗೆಳೆಯರು ಗಾಯಗೊಂಡಿದ್ದಾರೆ. ಸುದೀಪ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. 'ಸಣ್ಣಪುಟ್ಟ ಗಾಯಗಳಾಗಿವೆ ಅಷ್ಟೆ . ದೇವರ ದಯದಿಂದ ಹೆಚ್ಚು ಅಪಾಯವಾಗಲಿಲ್ಲ " ಎಂದು ಅಪಘಾತದ ಕುರಿತು ಸುದೀಪ್‌ ಪ್ರತಿಕ್ರಿಯಿಸಿದ್ದಾರೆ.

ಅಪಘಾತಕ್ಕೆ ಕಾರಣವಾದ ಸ್ಯಾಂಟ್ರೋ ಕಾರನ್ನು ಕೆಲವರು ಬೆಂಬತ್ತಿದರೂ, ಅತಿವೇಗದಲ್ಲಿ ಪಯಣಿಸಿರುವ ಸ್ಯಾಂಟ್ರೋಕಾರು ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದು , ಕಾರನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದಾರೆ.

ಸುದೀಪ್‌ ಗಾಯಗೊಂಡಿರುವ ಸುದ್ದಿ ತಿಳಿದ ಅಭಿಮಾನಿಗಳು ಜಮಾಯಿಸಿದ್ದರಿಂದಾಗಿ, ಎಂಜಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು .(ಇನ್ಫೋ ವಾರ್ತೆ)

English summary
Kannada filmdom's heartthrob Sudeep escaped from the jaws of death

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada