»   » ರಕ್ಷಿತಾ ಸ್ಥಾನವನ್ನು ಸಂಜನಾ ಮೇಡಂ ಮಾತ್ರ ತುಂಬಬಲ್ಲರು!

ರಕ್ಷಿತಾ ಸ್ಥಾನವನ್ನು ಸಂಜನಾ ಮೇಡಂ ಮಾತ್ರ ತುಂಬಬಲ್ಲರು!

Subscribe to Filmibeat Kannada


ಬಾಲಿವುಡ್‌ನ ಮಲ್ಲಿಕಾ ಶೆರಾವತ್‌ ಸಹಾ ನಾಚುವಂತೆ ತುಟಿಯನ್ನು ಬಟ್ಟಳನ್ನಾಗಿಸಿ, ಚುಂಬನ ದೃಶ್ಯದಲ್ಲಿ ಪಾಲ್ಗೊಂಡಿದ್ದ ಸಂಜನಾ, ‘ಗಂಡ ಹೆಂಡತಿ’ ಚಿತ್ರದ ನಂತರ ಸ್ಯಾಂಡಲ್‌ವುಡ್‌ನಲ್ಲಿ ತಮಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗುತ್ತದೆ ಎಂದು ನಂಬಿದ್ದರು. ವಿಪರ್ಯಾಸವೆಂದರೆ, ಕನ್ನಡದ ಪ್ರೇಕ್ಷಕರು ಚುಂಬನ ಕನ್ಯೆಯನ್ನು ಒಪ್ಪಿದರು... ಚಿತ್ರವನ್ನು ಒಪ್ಪಲಿಲ್ಲ...!

ಹೀಗಾಗಿ ತಮ್ಮ ಎಂದಿನ ಮಾಡೆಲಿಂಗ್‌ ರಂಗದಲ್ಲಿ ತೊಡಗಿಸಿಕೊಂಡರು. ಈ ಮಧ್ಯೆತೆಲುಗು-ತಮಿಳಲ್ಲೂ ಅವಕಾಶಗಳು ಬರುತ್ತಿವೆ. ಕನ್ನಡಿಗರು ಸಂಜನಾರನ್ನು ಮರೆತರು ಎನ್ನುವಾಗಲೇ ಸುದೀಪ್‌ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅವರೀಗ ಕೆಂಪೇಗೌಡ ಚಿತ್ರದ ನಾಯಕಿ. ಫೆಬ್ರವರಿ ಮೊದಲವಾರದಲ್ಲಿ ಚಿತ್ರ ಸೆಟ್ಟೇರಲಿದೆ.

ಚಿತ್ರದ ನಿರ್ದೇಶಕ ಓಂ ಪ್ರಕಾಶ್‌ ಪ್ರಕಾರ, ಸಂಜನಾಗೆ ಈ ಚಿತ್ರದಿಂದ ಒಳ್ಳೆ ಹೆಸರು ಬರಲಿದೆಯಂತೆ. ಸ್ಯಾಂಡಲ್‌ವುಡ್‌ನ ಸುಂಟರಗಾಳಿ ರಕ್ಷಿತಾ, ಮದುವೆ-ಮನೆ-ಮಕ್ಕಳು ಎಂಬ ಗುಂಗಿನಲ್ಲಿ ಬಣ್ಣದ ಬದುಕಿಗೆ ವಿದಾಯ ಹೇಳಿದ್ದಾರೆ. ಅವರಿಂದ ತೆರವಾಗಿರುವ ಸ್ಥಾನವನ್ನು ಸಂಜನಾ ಸಮರ್ಥವಾಗಿ ತುಂಬಬಲ್ಲಳು ಎಂಬ ವಿಶ್ವಾಸ ಓಂ ಪ್ರಕಾಶ್‌ ಅವರಿಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada