»   » ಸಂಜಯ್‌ದತ್‌ಗೆ ಎಕೆ-56 ಕೊಟ್ಟಿದ್ದು ನಿಜ -ಅಬು ಸಲೇಂ

ಸಂಜಯ್‌ದತ್‌ಗೆ ಎಕೆ-56 ಕೊಟ್ಟಿದ್ದು ನಿಜ -ಅಬು ಸಲೇಂ

Posted By:
Subscribe to Filmibeat Kannada


ಹೇಳಿಕೆ ಬಹಿರಂಗ, ಮತ್ತೆ ಸಮಸ್ಯೆಯ ಸುಳಿಯಲ್ಲಿ ‘ಖಳ್‌ನಾಯಕ್‌’!

ಮುಂಬೈ : 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟದ ಸಂದರ್ಭದಲ್ಲಿ ಬಾಲಿವುಡ್‌ ನಟ ಸಂಜಯ್‌ದತ್‌ಗೆ ಎಕೆ-56 ಬಂದೂಕು ನೀಡಿದ್ದಾಗಿ ಭೂಗತ ಪಾತಕಿ ಅಬು ಸಲೇಂ ಹೇಳಿದ್ದಾನೆ.

ಇಲ್ಲಿಯತನಕ ಮುಚ್ಚಿಡಲಾಗಿದ್ದ ಸಲೇಂ ತಪ್ಪೊಪ್ಪಿಗೆ ಹೇಳಿಕೆಯನ್ನು, ನಿಯೋಜಿತ ಟಾಡಾ ನ್ಯಾಯಾಧೀಶ ಪಿ.ಕೋಡೆ ಅವರ ಎದುರು ತೆರೆಯಲಾಯಿತು.

ಸ್ಫೋಟಕ್ಕೂ ಮುನ್ನ ಎ.ಕೆ.56 ಬಂದೂಕು, ಹ್ಯಾಂಡ್‌ಗ್ರೆನೇಡ್‌ ಹಾಗೂ ಇನ್ನಿತರ ಶಸ್ತ್ರಾಸ್ತ್ರಗಳನ್ನು ಬಾಲಿವುಡ್‌ ನಟ ಸಂಜಯ್‌ದತ್‌ ನಿವಾಸಕ್ಕೆ ಸ್ವತಃ ತಾನೇ ತಲುಪಿಸಿದ್ದಾಗಿ ಸಲೇಂ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾನೆ.

ಈ ಹೇಳಿಕೆಯಿಂದ ನಟ ಸಂಜಯ್‌ದತ್‌ ಮತ್ತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುವುದು ಖಚಿತ. ಸಲೇಂರ 16ಪುಟಗಳ ತಪ್ಪೊಪ್ಪಿಗೆ ಹೇಳಿಕೆಯನ್ನು ಸಿಬಿಐ ಡಿಐಜಿ ಓಪಿ ಛತ್ವಾಲ್‌ ಅವರ ಎದುರು ನವೆಂಬರ್‌20ರಂದು ದಾಖಲಿಸಿಕೊಳ್ಳಲಾಗಿತ್ತು.

(ಏಜೆನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada