»   » ‘ಜೋಗಿ’ ಸೇರಿದಂತೆ 20ಚಿತ್ರಗಳಿಗೆ ಸರ್ಕಾರದ ಸಬ್ಸಿಡಿ

‘ಜೋಗಿ’ ಸೇರಿದಂತೆ 20ಚಿತ್ರಗಳಿಗೆ ಸರ್ಕಾರದ ಸಬ್ಸಿಡಿ

Posted By:
Subscribe to Filmibeat Kannada


ಬೆಂಗಳೂರು : 2005-06ನೇ ಸಾಲಿನಲ್ಲಿ 20 ಚಲನಚಿತ್ರಗಳಿಗೆ ರಾಜ್ಯ ಸರ್ಕಾರ ಸಬ್ಸಿಡಿ ಘೋಷಿಸಿದೆ.

ಪ್ರೇಮ್‌ ನಿರ್ದೇಶನದ ‘ಜೋಗಿ’, ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ನಾಯಿನೆರಳು’, ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ತಾಯಿ’, ರತ್ನಜ ನಿರ್ದೇಶನದ ‘ನೆನಪಿರಲಿ’ ಹಾಗೂ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಅಮೃತಧಾರೆ’ ಸೇರಿದಂತೆ ಒಟ್ಟು 20 ಚಲನಚಿತ್ರಗಳು ಸಬ್ಸಿಡಿ ಹಣವನ್ನು ಪಡೆಯಲಿದೆ.

ಆಕಾಶ್‌, ಪಾಂಡುರಂಗ ವಿಠಲ, ನಲ್ಲ, ಮುಖಾಮುಖಿ, ಈಶ, ಸೆವೆನ್‌ ಓ ಕ್ಲಾಕ್‌, ಡೆಡ್ಲಿ ಸೋಮ ಹಾಗೂ ರಾಕ್ಷಸ,

ಮಕ್ಕಳ ಚಿತ್ರಗಳಾದ ತುತ್ತೂರಿ, ಅಆಇಈ, ತುಳು ಚಿತ್ರ ಕಡಲ ಮಗೆ, ಕೊಂಕಣಿ ಚಿತ್ರ ಪಾದ್ರಿ -ಇವು ಸಬ್ಸಿಡಿ ಪಡೆದ ಇನ್ನಿತರ ಚಿತ್ರಗಳು. ಸಬ್ಸಿಡಿ ಮೊತ್ತ ತಲಾ 10 ಲಕ್ಷ ರೂ.ಗಳಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada