»   » ರಮೇಶ್‌ ಕಿಟ್ಟಿಗೆ ‘ದರ್ಶನ’ದ ಭರವಸೆ

ರಮೇಶ್‌ ಕಿಟ್ಟಿಗೆ ‘ದರ್ಶನ’ದ ಭರವಸೆ

Posted By: Staff
Subscribe to Filmibeat Kannada
Darshan'
ಕಲಾ ಸಾಮ್ರಾಟ್‌ ಎಂದು ಕರೆಸಿಕೊಳ್ಳುವ ಎಸ್‌. ನಾರಾಯಣ್‌ ಮತ್ತು ರಾಜ್‌ ಕಿಶೋರ್‌ ಅವರ ಗರಡಿಯಲ್ಲಿ ಪಳಗಿರುವ ರಮೇಶ್‌ ಕಿಟ್ಟಿ ಅವರ ದರ್ಶನ್‌ ಚಿತ್ರ ಬಿಡುಗಡೆಗೆ ತಯಾರಾಗಿದೆ. ಇದು ಅವರ ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ.

ಭಯೋತ್ಪಾದನೆಯನ್ನೇ ವಿಷಯವಾಗಿಟ್ಟು ಕೊಂಡು ತೆಗೆದಿರುವ ಈ ಚಿತ್ರದ ನಾಯಕ ದರ್ಶನ್‌! ಈಚಿನ ದಿನಗಳಲ್ಲಿ ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವ ದರ್ಶನ್‌ಗೆ ಈ ಚಿತ್ರ ಡಿಫರೆಂಟ್‌ ಇಮೇಜ್‌ ನೀಡಲಿದೆ ಅನ್ನುವುದು ಕಿಟ್ಟಿ ಅಭಿಪ್ರಾಯ.

ಮಂಗಳೂರಿನಲ್ಲಿ ನಡೆದ ಪ್ರವೀಣ್‌ ತೊಗಾಡಿಯಾ ಉಪಸ್ಥಿತರಿದ್ದ ವಿಶ್ವ ಹಿಂದೂ ಪರಿಷತ್ತಿನ ಜಾಗೃತಿ ಸಮಾವೇಶದ ದೃಶ್ಯಗಳನ್ನು ಕಿಟ್ಟಿ ಚಿತ್ರದಲ್ಲಿ ಬಳಸಿಕೊಂಡಿರುವುದು ಚಿತ್ರದ ಹೈಲೈಟ್‌ಗಳಲ್ಲೊಂದಾಗಿದೆ.

ಮೇ 9 ರಂದು ಬಿಡುಗಡೆಯಾಗಲಿರುವ ದರ್ಶನ್‌ ಚಿತ್ರದಲ್ಲಿ ಕಿಟ್ಟಿಯವರು ಇಡೀ ಚಿತ್ರದ ಕಥೆಯನ್ನು ಒಂದೇ ಹಾಡಿನಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರಂತೆ. ಆ ಹಾಡನ್ನು ನೋಡದಿದ್ದರೆ ಚಿತ್ರದ ಕಥೆಯ ಲಿಂಕ್‌ ತಪ್ಪಿಹೋಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ದರ್ಶನ್‌ ಚಿತ್ರ ನಾಯಕ ನಟ ದರ್ಶನ್‌ಗೆ ಹೊಸ ಇಮೇಜ್‌ ತರುವುದೋ, ಕಿಟ್ಟಿಗೆ ಯಶ ತರುವುದೋ ಕಾದು ನೋಡಬೇಕು.

English summary
Ramesh Kitti has high hopes on his first movie 'Darshan'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada