»   » ಚಂದ್ರಚಕೋರಿ ಮುರಳಿಯ ‘ಕಂಠಿ’

ಚಂದ್ರಚಕೋರಿ ಮುರಳಿಯ ‘ಕಂಠಿ’

Posted By: Super
Subscribe to Filmibeat Kannada
Sandlewood hero Murali
ಚೊಚ್ಚಲ ಚಿತ್ರದಲ್ಲೇ ನಾಯಕನಾಗಿ ಯಶ ಕಂಡಿರುವ ಮುರಳಿಯ ಇನ್ನೊಂದು ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಚಿನ್ನೇಗೌಡರ ಪುತ್ರ ಹೊಸ ಚಿತ್ರದಲ್ಲಿ ಶ್ರಿಕಂಠನಾಗಿ ಬರುತ್ತಿದ್ದಾನೆ. 'ಚಂದ್ರ ಚಕೋರಿ" ಚಿತ್ರದ ಈ ನಾಯಕನ ಹೊಸ ಚಿತ್ರ'ಕಂಠಿ"

ಕಂಠಿ ಚಿತ್ರವನ್ನು ಕನಕಪುರ ಶ್ರಿನಿವಾಸ್‌ ನಿರ್ಮಿಸುತ್ತಿದ್ದಾರೆ. ಇದು ಮುರಳಿಗೆ ಎರಡನೆ ಚಿತ್ರವಾದರೆ ನವ ನಿರ್ದೇಶಕ ಭರತ್‌ಗೆ ಮೊದಲ ಚಿತ್ರ. ಚಿತ್ರಕ್ಕೆ 'ಅಭಿ" ಖ್ಯಾತಿಯ ರಮ್ಯಾ ನಾಯಕಿ. ಚಿತ್ರದ ವಿಭಿನ್ನತೆ ಎಂದರೆ 80ರ ದಶಕದ ಶೈಲಿಯ ಐಟಂ ಡ್ಯಾನ್ಸ್‌ . ಇದಕ್ಕೆ ನೆರೆಯ ತೆರೆಯ ನೃತ್ಯಗಾರ್ತಿ ಮಮ್ತಾಜ್‌ ಮೈ-ಕೈ ಬಳುಕಿಸಲಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ಕ್ಯಾಬರೆ ನರ್ತಕಿಯರು ಸ್ಲಿಮ್‌-ಟ್ರಿಮ್‌ ಆಗಿರುತ್ತಾರೆ. ಆದರೆ ಕನ್ನಡದಲ್ಲಿ ಗಜಗಾಮಿನಿಯರನ್ನೇ ಬಳಸುತ್ತಾರಲ್ಲ ? ನಮ್ಮ ನಿರ್ಮಾಪಕರ ಹೃದಯ ವಿಶಾಲವಾಗಿದೆಯಲ್ಲ !

ಬಾಲಿವುಡ್‌ ನಟ ಗೋವಿಂದ ನಾಮದೇವ್‌ ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಛಾಯಾಗ್ರಹಣ ವೇಣು ಅವರದ್ದು. ಗುರುಕಿರಣ್‌ ಸಂಗೀತ ನೀಡಿದ್ದಾರೆ. ಚಿತ್ರತಂಡ ಈಗಾಗಲೇ ಬೆಳಗಾಂನಲ್ಲಿ ಚಿತ್ರೀಕರಣ ಮುಗಿಸಿ ಕೊಂಡು ಬಂದಿದೆ. ಚಿತ್ರಕತೆಯು ಮರಾಠಿ ಮತ್ತು ಕನ್ನಡದ ಮಧ್ಯೆ ಭೇದ ಯಾಕೆ ? ಎಂಬ ಕುರಿತು ಮಾತನಾಡಲಿದೆಯಂತೆ. ಆದಕ್ಕಾಗಿ ಶೂಟಿಂಗ್‌ ಬೆಳಗಾಂನಲ್ಲಿ ನಡೆದಿದೆ.

ಮುರಳಿಗೆ ಈ ಚಿತ್ರದ ಬಗ್ಗೆ ತುಂಬಾ ಭರವಸೆಯಿದೆ. ಚಿತ್ರಕತೆ ವಿಭಿನ್ನವಾಗಿದೆ. ಆದ್ದರಿಂದ ಯಶಸ್ಸು ಖಂಡಿತವಾಗಿಯೂ ಇದೆ ಎನ್ನುತ್ತಾರೆ. ನೀ ನಡೆವ ಹಾದಿಯಲ್ಲಿ ಯಶಸ್ಸೇ ಸಿಗಲಿ ಎಂದು ಮುರಳಿಗೆ ಹಾರೈಸೋಣವೇ...

English summary
Sandlewood hero Murali perfrorms in Kanti

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada