»   » ರಾಮ್‌ಕುಮಾರ್‌ ನಿರ್ಮಾಣದ ಚಿತ್ರದಲ್ಲಿ ಶಶಿ, ಐಶ್ವರ್ಯ...

ರಾಮ್‌ಕುಮಾರ್‌ ನಿರ್ಮಾಣದ ಚಿತ್ರದಲ್ಲಿ ಶಶಿ, ಐಶ್ವರ್ಯ...

Subscribe to Filmibeat Kannada


ಈ ಮಾಸದಲ್ಲಿಯೇ ಬೆಳ್ಳಿತೆರೆಗೆ ಬರಲಿದ್ದಾರೆ ‘ಪಾಂಡವರು’! ಚಿತ್ರದ ತುಂಬ ತಾರಾಲೋಕ! ಅಂಬಿ, ಶಶಿ, ಅಭಿ, ಜಗ್ಗಿ, ದೇವು, ರಾಮ್‌, ಇತ್ಯಾದಿ ಇತ್ಯಾದಿ.

ನಾಯಕರ ದೊಡ್ಡ ದಂಡನ್ನೇ ಒಳಗೊಂಡಿರುವ ‘ಪಾಂಡವರು’ ಚಿತ್ರದ, 48ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ಅಂಬರೀಷ್‌, ಶಶಿಕುಮಾರ್‌, ಜಗ್ಗೇಶ್‌, ದೇವರಾಜ್‌, ರಾಮ್‌ಕುಮಾರ್‌ ಮತ್ತು ಅಭಿಜಿತ್‌ ಸೇರಿದಂತೆ, ತಾರಾಲೋಕದ ತಾರೆಗಳು ಚಿತ್ರದಲ್ಲಿ ತುಂಬಿತುಳುಕುತ್ತಿವೆ.

ತಮ್ಮ ಪತ್ನಿ ಪೂರ್ಣಿಮಾ(ರಾಜ್‌ಕುಮಾರ್‌ ಅವರ ಪುತ್ರಿ) ಅವರ ಹೆಸರಲ್ಲಿ ಚಿತ್ರವನ್ನು ನಿರ್ಮಾಣ ಮಾಡಿರುವ ರಾಮ್‌ಕುಮಾರ್‌, ಚಿತ್ರದ ಯಶಸ್ಸಿನ ಬಗ್ಗೆ ವಿಶ್ವಾಸ ಹೊಂದಿದ್ದಾರೆ.

ಮಾಜಿ ಸಂಸದ, ನಟ ಶಶಿಕುಮಾರ್‌ರ ಜೋಡಿಯಾಗಿ ಚಿತ್ರದಲ್ಲಿ ಐಶ್ವರ್ಯ ನಟಿಸುತ್ತಿದ್ದಾರೆ. ಈಕೆ ಬಹುಭಾಷಾ ತಾರೆ ಲಕ್ಷ್ಮಿಅವರ ಸುಪುತ್ರಿ. ಐಶ್ವರ್ಯ ಅವರ ಚಿತ್ರ ಬದುಕಿಗೆ ‘ಪಾಂಡವರು’ ಚಿತ್ರ ದಾರಿ ಮಾಡುವುದೇನೋ ಕಾದು ನೋಡಬೇಕು.

ಮಲಯಾಳಂನ ‘ಹರಿಶ್ಚಂದ್ರನ್‌’ಚಿತ್ರದ ಕತೆಯನ್ನು ಆಧಾರವಾಗಿ ಹೊಂದಿರುವ ‘ಪಾಂಡವರು’ ಚಿತ್ರದ ನಿರ್ದೇಶಕರು ಕೆ.ವಿ.ರಾಜು. ಚಿತ್ರಕತೆ, ಸಂಭಾಷಣೆ, ಹಾಡು ಮತ್ತು ಸಂಗೀತದ ಹೊಣೆ ಹಂಸಲೇಖ ಅವರದು. ಮೇ ತಿಂಗಳಲ್ಲಿ ಚಿತ್ರ ತೆರೆಕಾಣಲಿದ್ದು, ಪ್ರೇಕ್ಷಕರ ಪ್ರೀತಿ ದೊರೆತರೆ ‘ಪಾಂಡವರು’ ಟಾಕೀಸ್‌ನಲ್ಲಿ ನಿಲ್ಲಲು ಸಾಧ್ಯ. ಇಲ್ಲದಿದ್ದರೆ ರಾಮ್‌ಕುಮಾರ್‌ ಕತೆ, ‘ರಾಮ್‌... ರಾಮ... ’ ಅನ್ನುವಂತಾಗುತ್ತದೆ. ಆಗಾಗದಿರಲಿ...

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada