»   » ಕಿರಿಯರ ಕಟಕಟೆಯಲ್ಲಿ ಈಗ ‘ಕಾಮಿಡಿ ಟೈಮ್‌’ ಗಣೇಶ್‌!

ಕಿರಿಯರ ಕಟಕಟೆಯಲ್ಲಿ ಈಗ ‘ಕಾಮಿಡಿ ಟೈಮ್‌’ ಗಣೇಶ್‌!

Subscribe to Filmibeat Kannada


ಬೆಂಗಳೂರು : ‘ಕಿರಿಯರ ಕಟೆಕಟೆ’ಯಲ್ಲಿ ಕೈಕಟ್ಟಿಕೊಂಡು ನಿಂತು, ‘ಮುಂಗಾರು ಮಳೆ’ ಖ್ಯಾತಿಯ ಗಣೇಶ್‌ ಉತ್ತರ ಹೇಳಲಿದ್ದಾರೆ. ಮಕ್ಕಳ ಪ್ರಶ್ನೆಗಳಿಗೆ ಸಮಾಧಾನ ಹೇಳಲು ಅವರು ಸಜ್ಜಾಗಿದ್ದಾರೆ.

ಮೇ 5ರಂದು ಮಾಗಡಿ ರಸ್ತೆಯ ಟೋಲ್‌ಗೇಟ್‌ ಬಳಿಯ ಪ್ರಮೀಳಾಬಾಯಿ ಮಾನೆ ಪಾಲಿಕೆ ಶಾಲೆಯಲ್ಲಿ, ಕಿರಿಯರ ಕಟೆಕಟೆ ಕಾರ್ಯಕ್ರಮ ನಡೆಯಲಿದೆ. ವಿಜಯನಗರದ ಬಿಂಬ ಸಂಸ್ಥೆ ಕಾರ್ಯಕ್ರಮ ಏರ್ಪಡಿಸಿದೆ ಎಂದು ಬಿಂಬ ಅಧ್ಯಕ್ಷೆ ಶೋಭಾ ವೆಂಕಟೇಶ್‌ ತಿಳಿಸಿದ್ದಾರೆ.

ಬರೀ ಮಕ್ಕಳು ನಡೆಸಿಕೊಡುವ ನ್ಯಾಯಾಲಯದ ಕಲಾಪದಲ್ಲಿ, ಕರಿ ಕೋಟು ತೊಟ್ಟ ಪುಟಾಣಿ ವಕೀಲರ ಪ್ರಶ್ನೆಗಳು, ಗಣೇಶ್‌ರ ಚುರುಕು ಉತ್ತರಗಳ ಜುಗಲ್‌ಬಂದಿ ನಿಜಕ್ಕೂ ಕುತೂಹಲಕಾರಿ.

ವಿಚಾರಣೆ ಆಲಿಸಿ ಶಿಕ್ಷೆ ನೀಡಲು ರಂಗಾಯಣ ರಘು ನ್ಯಾಯಾಧೀಶರಾಗಲಿದ್ದಾರೆ! ಇನ್ನು ಏನೇನು ಅಚ್ಚರಿಗಳಿವೆಯೋ ಕಾದು ನೋಡೋಣ.

(ದಟ್ಸ್‌ ಕನ್ನಡ ವಾರ್ತೆ)

Please Wait while comments are loading...