»   » ಜೂ.4ಕ್ಕೆ ‘ಪ್ರೀಪ್ರೇಪ್ರ’ ಧ್ವನಿಸುರುಳಿ ಬಿಡುಗಡೆ

ಜೂ.4ಕ್ಕೆ ‘ಪ್ರೀಪ್ರೇಪ್ರ’ ಧ್ವನಿಸುರುಳಿ ಬಿಡುಗಡೆ

Subscribe to Filmibeat Kannada

ಇದೇ ಜೂನ್‌ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರ ಅನೇಕ ಕಾರಣಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಕವಿತಾ ಲಂಕೇಶ್‌ ನಿರ್ದೇಶನ, ಮನೋಮೂರ್ತಿ ಸಂಗೀತ, ಅನಂತನಾಗ್‌ರಂಥಾ ಪಳಗಿದ ನಟನ ಇರುವಿಕೆ, ಸುನಿಲ್‌- ಅನು ಪ್ರಭಾಕರ್‌ ಅಪರೂಪದ ಜೋಡಿ- ಹೀಗೆ ಚಿತ್ರದಲ್ಲಿ ಸಾಕಷ್ಟು ಸೆಳಕಿವೆ.

ಜೂನ್‌ 4ನೇ ತಾರೀಕು ಚಿತ್ರದ ಹಾಡುಗಳ ಧ್ವನಿ ಸುರುಳಿ ಬಿಡುಗಡೆಯಾಗಲಿದೆ.

ಆಕಾಶ್‌ ಆಡಿಯೋ ಕ್ಯಾಸೆಟ್ಟಿಗೆ ಹಾಡುಗಳ ತುಂಬಿಸಿ ಹೊರ ಬಿಡಲಿದೆ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅಮೆರಿಕನ್ನಡಿಗ ರಾಮ್‌ಪ್ರಸಾದ್‌ (‘ಮೂಡಲ್‌ ಕುಣಿಗಲ್‌ ಕೆರೆ...’ ಖ್ಯಾತಿ) ನಾಲ್ಕು ಹಾಡುಗಳನ್ನು ಹಾಡಿದ್ದಾರೆ. ಬಿ.ಜಯಶ್ರೀ ಹಾಗೂ ರಾಮ್‌ಪ್ರಸಾದ್‌ ಹಾಡಿರುವ ‘ಕಬ್ಬಿನ ಜಲ್ಲೆ ಬಂತು ಕಚ್ಚಿಕೋ...’ ಹಾಡು ಚಿತ್ರೀಕರಣದ ವೇಳೆಯೇ ಸಾಕಷ್ಟು ಸದ್ದು ಮಾಡಿತ್ತು.

ಕ್ಯಾಸೆಟ್‌ ಬಿಡುಗಡೆಗೆ ಮುನ್ನವೇ ಅದರಲ್ಲಿ ಯಾವ್ಯಾವ ಹಾಡುಗಳಿವೆ, ಬರೆದದ್ದು ಯಾರು, ಹಾಡಿದ್ದು ಯಾರು ಅಂತ ಓದಿಕೊಳ್ಳಿ. ಎಲ್ಲಾ ಹಾಡುಗಳಿಗೂ ಮನೋಮೂರ್ತಿ ಮಟ್ಟು ಹಾಕಿದ್ದಾರೆ-

 • ಸುಂದರ ಸುಂದರ ಲೋಕವಿದು
  ಸಾಹಿತ್ಯ- ಕಲ್ಯಾಣ್‌
  ಗಾಯಕಿ- ಚಿತ್ರ
 • ಕಬ್ಬಿನ ಜಲ್ಲೆ ಬಂತು ಕಚ್ಚಿಕೋ
  ಸಾಹಿತ್ಯ- ಡಾ.ನಾಗೇಂದ್ರ ಪ್ರಸಾದ್‌
  ಹಾಡಿರುವವರು- ಬಿ.ಜಯಶ್ರೀ, ರಾಮ್‌ಪ್ರಸಾದ್‌
 • ನನ್ನ ಪ್ರೀತಿಸ್ತೀಯ ನನ್ನ ನನ್ನ ಪ್ರೇಮಿಸ್ತೀಯ
  ಸಾಹಿತ್ಯ- ಡಾ.ನಾಗೇಂದ್ರ ಪ್ರಸಾದ್‌
  ಹಾಡಿರುವವರು- ರಾಮ್‌ಪ್ರಸಾದ್‌, ನಂದಿತಾ
 • ಎಲ್ಲಿದ್ದೆ ಇಲ್ಲಿ ತಂಕ
  ಹಳೆಯ ಗೀತೆಗಳ ಸಂಗ್ರಹ
  ಹಾಡಿರುವವರು- ಚಿತ್ರ, ರಾಮ್‌ಪ್ರಸಾದ್‌
 • ಮನಸೆ ಮನಸೆ
  ಸಾಹಿತ್ಯ- ಡಾ.ನಾಗೇಂದ್ರ ಪ್ರಸಾದ್‌
  ಹಾಡಿರುವವರು- ಸುರೇಶ್‌ ಪೀಟರ್ಸ್‌, ಅರ್ಚನಾ ಉಡುಪ
 • ಚಪಲ ಚಪಲ
  ಸಾಹಿತ್ಯ- ಡಾ.ನಾಗೇಂದ್ರ ಪ್ರಸಾದ್‌
  ಹಾಡಿರುವವರು- ರಾಮ್‌ಪ್ರಸಾದ್‌, ಶಾಂ ಮತ್ತು ಸಂಗಡಿಗರು
(ಇನ್ಫೋ ವಾರ್ತೆ)

ಇವನ್ನೂ ಓದಿ-
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada