»   » ಸುನೀಲ್‌ ಕುಮಾರ್‌ ದೇಸಾಯಿ ಕೈಯಲ್ಲಿ ಮತ್ತೆ ಹಳೇ ಫಾರ್ಮುಲಾ!

ಸುನೀಲ್‌ ಕುಮಾರ್‌ ದೇಸಾಯಿ ಕೈಯಲ್ಲಿ ಮತ್ತೆ ಹಳೇ ಫಾರ್ಮುಲಾ!

Subscribe to Filmibeat Kannada

ಬಹು ನಿರೀಕ್ಷೆಯ ಚಿತ್ರ‘ರಮ್ಯ ಚೈತ್ರ ಕಾಲ’ ರಮ್ಯತೆ ಕಳೆದುಕೊಂಡ ಸಂಗತಿ ಎಲ್ಲರಿಗೂ ಗೊತ್ತು. ಹೀಗಾಗಿ ‘ಹಳೇ ಗಂಡನ ಪಾದವೇ ಗತಿ’ ಎಂಬಂತೆ, ಸುನೀಲ್‌ ಕುಮಾರ್‌ ದೇಸಾಯಿ ಮತ್ತೆ ಹಳೆ ಫಾರ್ಮುಲಾವನ್ನೇ ಕೈಗೆತ್ತಿಕೊಂಡಿದ್ದಾರೆ.

ಪ್ರೇಕ್ಷಕರ ಅಭಿರುಚಿ ಬದಲಿಸುವ ಮಾತಾಡುತ್ತಿದ್ದ ದೇಸಾಯಿ, ತರ್ಕ, ಉತ್ಕರ್ಷ, ನಿಷ್ಕರ್ಷ ಮಾದರಿಯ ಇನ್ನೊಂದು ಚಿತ್ರ ‘ಕ್ಷಣ ಕ್ಷಣ’ವನ್ನುಕೈಗೆತ್ತಿಕೊಂಡಿದ್ದಾರೆ. ಚಿತ್ರದ ಮುಹೂರ್ತ ಗುರುವಾರ ಆರಂಭಗೊಂಡಿದ್ದು, ದೇಸಾಯಿ ಶುಭ ಕ್ಷಣದ ನಿರೀಕ್ಷೆಯಲ್ಲಿದ್ದಾರೆ.

ಸೋಲಿಗೆ ಗೋಲಿ ಹೊಡೆದು, ಗೆಲುವ ದಕ್ಕಿಸಿಕೊಳ್ಳಲು ದೇಸಾಯಿ ತಿಣುಕಾಡುತ್ತಿದ್ದಾರೆ. ಹೀಗಾಗಿಯೇ ಹೊಸಬರಿಗೆ ಆದ್ಯತೆ ಎಂಬ ಆದರ್ಶವನ್ನು ಕೈಬಿಟ್ಟಿದ್ದಾರೆ. ಮುಂಬೈನ ಬೆಡಗಿ ಕಿರಣ್‌ ರಾಥೋಡ್‌ ಎಂಬ ಹಾಟ್‌ ಸುಂದರಿಯನ್ನು ಸ್ಯಾಂಡಲ್‌ವುಡ್‌ಗೆ ಕರೆತಂದಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ಪ್ರೇಕ್ಷಕರ ಬೇಡಿಕೆಯ ನಟಿಯಾಗಿ ಕಿರಣ್‌ ಪರಿಚಿತಳು. ಜೊತೆಗೆ ದೇಸಾಯಿ ಚಿತ್ರಗಳ ಕಾಯಂ ನಾಯಕಿ ಪ್ರೇಮಾ, ‘ಮೈ ಆಟೋಗ್ರಾಫ್‌’ ಚಿತ್ರದ ಮಲಯಾಳಿ ಪ್ರೇಮಿ ಶ್ರೀದೇವಿಕಾ ಕೂಡ ಚಿತ್ರದಲ್ಲಿದ್ದಾಳೆ.

ಮೂವರು ನಾಯಕಿಯರ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ಆದಿತ್ಯ ನಿರ್ವಹಿಸಲಿದ್ದಾರೆ. ಆರ್‌.ಪಿ.ಪಟ್ನಾಯಕ್‌ ಸಂಗೀತ ಚಿತ್ರಕ್ಕಿದೆ. ತಿರುಮಲೈ ಚಿತ್ರದ ನಿರ್ಮಾಪಕರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada