ಉಮಾ ಶಂಕರಿ! ತಂದೆ ಕ್ಯಾಮರಾ ಹಿಂದೆ ತಾನು ಅದರ ಮುಂದೆ

By Staff
  • ಸಿನಿಡೆಸ್ಕ್‌, ದಟ್ಸ್‌ ಕನ್ನಡ
ರಾಜಕಾರಣಿಗಳು ತಮ್ಮ ಮಕ್ಕಳನ್ನು ಅಖಾಡಕ್ಕಿಳಿಸಿದಾಗ dynasty ಎಂದು ಜರೆಯುತ್ತಾರೆ. ಆದರೆ ಚಿತ್ರರಂಗದಲ್ಲಿ ಈ ಮಾತು ಕೇಳಿ ಬರುವುದು ತೀರಾ ವಿರಳ. ಯಾಕಂದ್ರೆ ಪ್ರತಿಭೆ ಇಲ್ಲದಿದ್ದರೆ ಅಪ್ಪ ಸಾರ್ವಭೌಮ ಆಗಿದ್ದರೂ ಜನ ಒಪ್ಪಲ್ಲ. ಇದೊಂದು unorganised industry.

ಚಿತ್ರರಂಗದಲ್ಲೂ ತಲೆಮಾರಿನ ಕೊಂಡಿಯಿದೆ. ಕನ್ನಡ ಚಿತ್ರರಂಗ ಮೂರು ತಲೆಮಾರು ಕಂಡಿದೆ. ಡಾ.ರಾಜ್‌ ಮೊಮ್ಮಗಳು ನಟಿಸಿದ್ದಾಳೆ. ಹಲವರ ಮಗ-ಮಗಳು ಬಂದಿದ್ದಾರೆ. ಕೆಲವರು ನಿಂತರೆ, ಹಲವರು ತೋಪಾಗಿದ್ದಾರೆ. ‘ಸ್ಯಾಂಡಲ್‌ ವುಡ್‌’ ಎಂದರೆ ‘ಮೆಜೆಸ್ಟಿಕ್‌’ನ ಹಾಗಿದೆ. ಬಂದವರು-ಬಾರದವರು ಯಾರೆಂದು ಅರಿವಾಗುವುದೇ ಇಲ್ಲ. ನೆಲೆ ನಿಂತವರು ಮಾತ್ರ ಅಪರಿಚಿತ ಲೋಕದ ಚಿರಪರಿಚಿತರು.

ಪ್ರಸ್ತುತ ಸ್ಯಾಂಡಲ್‌ ವುಡ್‌ಗೆ ತಮ್ಮ ಮಕ್ಕಳನ್ನು ಪರಿಚಯಿಸುತ್ತಿರುವವರು ‘ರಾಜೇಂದ್ರ ಬಾಬು’ ನಿರ್ದೇಶಕದ್ವಯರು. ಈ ಚಿತ್ರಗಳಿಗೆ ಅವರದ್ದೇ ನಿರ್ದೇಶನ. ಎಸ್‌ವಿ ರಾಜೇಂದ್ರ ಸಿಂಗ್‌ ಬಾಬು ಮಗ ಆದಿತ್ಯನನ್ನು ಲವ್‌ ಚಿತ್ರದ ಮೂಲಕ ತೆರೆಗೆ ತರಲಿದ್ದಾರೆ. ಆದರೆ ಡಿ. ರಾಜೇಂದ್ರ ಬಾಬು ಪರಿಚಯಿಸುತ್ತಿರುವುದು ಮಗಳು ಉಮಾಶಂಕರಿಯನ್ನು. ಚಿತ್ರ ‘ಉಪ್ಪಿ ದಾದಾ ಎಂ.ಬಿ.ಬಿ.ಎಸ್‌’.

ಉಮಾ ಕನಡಕ್ಕೆ ಹೊಸಬರೇ ಹೊರತು ಸಿನಿಮಾಗಲ್ಲ. ನಿರ್ದೇಶಕ ಡಿ. ರಾಜೇಂದ್ರ ಬಾಬು ಹಾಗೂ ಖ್ಯಾತ ನಟಿ ಸುಮಿತ್ರಾ ಅವರ ಪುತ್ರಿ ಉಮಾ, ಈಗಾಗಲೇ ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ 25 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಂಭೀರ ನಟಿ ಉಮಾ ಮುನ್ನಾ ಭಾಯಿ (ಮೂಲಚಿತ್ರ) ಚಿತ್ರದಲ್ಲಿನ ಗ್ರೇಸಿ ಸಿಂಗ್‌ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.

ಇವರ ತಾಯಿ ಸುಮಿತ್ರಾ ಸಹ ಉಪ್ಪಿ ದಾದಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅದೂ ಮಗಳಿಗೆ ಅತ್ತೆಯಾಗಿ. ಅಲ್ಲಿಗೆ ಕೌಟುಂಬಿಕರು ನೋಡಬಹುದಾದ ಚಿತ್ರ ಎಂದಾಯಿತು. ನಾಯಕಿಯಾದವಳು ಬರೀ ಗ್ಲಾಮರ್‌ ಆಗಿರುವುದನ್ನು ಇಷ್ಟಪಡದ ಉಮಾ ತನ್ನ ಅಮ್ಮ ಆಯ್ದುಕೊಂಡ ಪಾತ್ರಗಳನ್ನು ಮೆಚ್ಚುತ್ತಾರೆ. ಪಾತ್ರ ಚಿಕ್ಕದೇ ಇರಲಿ ಆದರೆ ಆ ಪಾತ್ರಕ್ಕೆ ಮಹತ್ವವಿರಬೇಕು ಎನ್ನುವುದು ಉಮಾ ಆಶಯ.

ಉಮಾ ತುಂಬಾ ಗ್ಲಾಮರ್‌ ಅನ್ನುವಂತಹ ಪಾತ್ರದಲ್ಲಿ ಅಭಿನಯಿಸಿಲ್ಲವಂತೆ. ಹಿಂದೊಮ್ಮೆ ‘ಯುವನಟರ ಜೊತೆ ನಟಿಸುವುದಕ್ಕಿಂತ ಪಕ್ವ ಹಿರಿ ನಟರೊಡನೆ ನಟಿಸುವುದೇ ಲೇಸು’ ಎಂದು ಉಸುರಿದ ನೆನಪು. ಆಕೆಗೆ ಎಲ್ಲದಕ್ಕೂ ಅಮ್ಮನೇ ರೋಲ್‌ ಮಾಡೆಲ್‌. ಅಮ್ಮನ ನಟನೆ, ಅಡುಗೆ, ಸಭ್ಯತೆ ಹೀಗೆ ಪಟ್ಟಿ ಬೆಳೆಯುತ್ತದೆ.

ಮದುವೆ ಕುರಿತು ಕೇಳಿದರೆ ‘ನನ್ನ ಆಯ್ಕೆಯ ಹುಡುಗ ಇನ್ನೂ ಸಿಕ್ಕಿಲ್ಲ. ಸಿಕ್ಕಿದರೂ ಮದುವೆಯಾಗಲು ಬಹಳ ಸಮಯವಿದೆ. ಅದಕ್ಕೆ ನನಗೆ romance ಎಂದರೆ ಏನೆಂದು ಅನುಭವವಿಲ್ಲ ’ಎನ್ನುತ್ತಾರೆ ಈ ಮುಗುದ ಮೊಗದ ಶಂಕರಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X