»   » ಮುರಳಿ ‘ಮುರಾರಿ’ಯಲ್ಲ ‘ಗೋಪಿ’!

ಮುರಳಿ ‘ಮುರಾರಿ’ಯಲ್ಲ ‘ಗೋಪಿ’!

Subscribe to Filmibeat Kannada

ಇದು ರಿಮೇಕ್‌ ಚಿತ್ರಗಳ ಕಾಲ! ತೆಲುಗಿನ ‘ಮುರಾರಿ’ ಕನ್ನಡದಲ್ಲಿ ‘ಗೋಪಿ’ ಯಾಗುತ್ತಿದೆ.‘ಚಂದ್ರಚಕೋರಿ’ ಖ್ಯಾತಿಯ ಮುರಳಿ,‘ಗೋಪಿ’ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಭೈರೇಗೌಡ ನಿರ್ಮಾಣದ ಈ ಚಿತ್ರದ ನಾಯಕಿ ಗೌರಿ. ತೆಲುಗಿನ ‘ಬನ್ನಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಗುರ್ತಿಸಲ್ಪಟ್ಟಿರುವ ಗೌರಿ, ಪುನೀತ್‌ ರಾಜ್‌ಕುಮಾರ್‌ ಅವರ ಹೊಸ ಚಿತ್ರದ ನಾಯಕಿ. ಆ ಚಿತ್ರ ಬಿಡುಗಡೆಗೆ ಮೊದಲೇ ‘ಗೋಪಿ’ ಗೆ ಅವರು ಆಯ್ಕೆಯಾಗಿದ್ದಾರೆ.

‘ಚಂದ್ರಚಕೋರಿ’ ನಂತರ ಬ್ರೇಕ್‌ಗಾಗಿ ಕಾಯುತ್ತಿರುವ ಮುರಳಿ ಪಾಲಿಗೆ, ‘ಯಶವಂತ್‌’, ‘ಕಂಠಿ’ ಚಿತ್ರಗಳು ನಿರೀಕ್ಷೆಯಷ್ಟು ಯಶಸ್ಸನ್ನು ತಂದುಕೊಡಲಿಲ್ಲ. ಮಹೇಶ್‌ಬಾಬು ಮತ್ತು ಸೋನಾಲಿ ಬೇಂದ್ರೆ ಜೋಡಿಯ ತೆಲುಗಿನ ಸೂಪರ್‌ ಹಿಟ್‌‘ಮುರಾರಿ’, ಕನ್ನಡದಲ್ಲಿ ‘ಗೋಪಿ’ಯಾಗಿ ಜಯಭೇರಿ ಭಾರಿಸಬಹುದೆಂಬ ವಿಶ್ವಾಸ ಮುರಳಿ ಅವರದು.

ಮುದ್ದುರಾಜ್‌ ನಿರ್ದೇಶನದ ಈ ಚಿತ್ರಕ್ಕೆ ಮಣಿ ಶರ್ಮ ಸಂಗೀತ ನೀಡುತ್ತಿದ್ದು, ಎಂ.ಆರ್‌. ಸೀನು ಛಾಯಾಗ್ರಾಹಕರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada