»   » ಸುದೀಪ್‌ರ ಗೂಳಿ ನಾಯಕಿ...ಮಲಯಾಳಿ ಮಮತಾ

ಸುದೀಪ್‌ರ ಗೂಳಿ ನಾಯಕಿ...ಮಲಯಾಳಿ ಮಮತಾ

Posted By:
Subscribe to Filmibeat Kannada


ಮಲಯಾಳಂ ಚಿತ್ರರಂಗದ ಮಮ್ಮುಟ್ಟಿ , ಮೋಹನ್ ಲಾಲ್, ಸುರೇಶ್ ಗೋಪಿ, ಜಯರಾಂ ಮತ್ತಿತರ ಖ್ಯಾತನಾಮರಿಗೆ ನಾಯಕಿಯಾಗಿ ಮಿಂಚಿದ ಮಮತಾ ಮೋಹನ್ ದಾಸ್ ಎಂಬ ಮಲಯಾಳಿ ಚೆಲುವೆ, ಸ್ಯಾಂಡಲ್‌ವುಡ್ ಹೊಸ್ತಿಲು ತುಳಿಯಲಿದ್ದಾರೆ.

ಸೋಮವಾರದಿಂದ ಆರಂಭವಾಗಲಿರುವ ‌ಗೂಳಿ ಚಿತ್ರದ ನಾಯಕಿಯಾಗಿ ಮಮತಾ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಮೌಂಡ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯಾದ ಮಮತಾ, ತೆಲುಗಿನಲ್ಲೂ ಅಭಿನಯಿಸಿದ್ದಾರೆ. ಇಷ್ಟು ಮಾತ್ರವಲ್ಲ ಇವರು ಗಾನ ಕೋಗಿಲೆ. ಪಾಶ್ಚಾತ್ಯ ಮತ್ತು ಶಾಸ್ತ್ರೀಯ ಸಂಗೀತಗಳು ಮಮತಾಗೆ ಗೊತ್ತು. ತೆಲುಗಿನ ರಾಖಿ ಚಿತ್ರಕ್ಕಾಗಿ ಮಮತಾ ಹಾಡಿದ, ರಾಖಿ ರಾಖಿ ನಾ ಕವಾಸಾಕಿ.. ಹಾಡು, ತೆಲುಗಿನಲ್ಲಿ ಮನೆಗೀತೆ.

ಸಾಲುಸಾಲು ಸೋಲುಗಳು ಮತ್ತು ಇತ್ತೀಚಿನ ಮಸ್ತಿ ಚಿತ್ರದ ಭಯಂಕರ ಸೋಲಿನಿಂದ ಕಂಗೆಡದ ನಿರ್ಮಾಪಕ ಕೋಟಿ ರಾಮು, ಗೂಳಿ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಅವರಿಗೆ ನಾಯಕ ನಟ ಸುದೀಪ್ ತಾರಾಮೌಲ್ಯದ ಮೇಲೆ ಅತಿಯಾದ ನಂಬಿಕೆ.

ಪಿ.ಎನ್.ಸತ್ಯ ನಿರ್ದೇಶನದ ಗೂಳಿ ಚಿತ್ರಕ್ಕೆ ಗಾಯಕ ಅನೂಪ್ ಸಂಗೀತ ನೀಡುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada