»   » ಸಿಟ್ಟಿಗೆದ್ದ ಸಮುದ್ರ: ಶಿವಣ್ಣ ,ಆಮದು ನೇಹಾ ಅಪಾಯದಿಂದ ಪಾರು

ಸಿಟ್ಟಿಗೆದ್ದ ಸಮುದ್ರ: ಶಿವಣ್ಣ ,ಆಮದು ನೇಹಾ ಅಪಾಯದಿಂದ ಪಾರು

Posted By: Super
Subscribe to Filmibeat Kannada

ಜೀಪ್‌ನ ಚಕ್ರಗಳು ಸಮುದ್ರದಲ್ಲಿ ಹೂತುಹೋಗಿದ್ದವು.ಭೋರ್ಗರೆಯುತ್ತಿದ್ದ ಅಲೆಗಳಲ್ಲಿ ಜೀಪು ಮುಳುಗಿಹೋಯಿತು.ಜೀಪಿನಲ್ಲಿದ್ದವರಲ್ಲಿ ನಾಯಕ ಶಿವಣ್ಣ ಹಾಗೂ ಮುಂಬಯಿಯಿಂದ ಆಮದಾದ ನಾಯಕಿ ನೇಹಾ ಸೇರಿದ್ದರು!

ಇದು ಸಿನಿಮಾ ಘಟನೆಯಲ್ಲ ; ಸಿನಿಮಾ ತಂಡ ಎದುರಿಸಿದ ಸಿನಿಮೀಯ ಘಟನೆ. 'ಸ್ಮೈಲ್‌" ಚಿತ್ರತಂಡ ಈ ಆಕಸ್ಮಿಕ ಘಟನೆಯಿಂದ ಪವಾಡ ಸದೃಶ ರೀತಿಯಲ್ಲಿ ಪಾರಾಗಿದೆ.

ಘಟನೆ ನಡೆದದ್ದು ಉಡುಪಿ ಸಮೀಪದ ಕೆಮ್ಮಣ್ಣು ಬಳಿಯ ಸಮುದ್ರದಂಚಿನಲ್ಲಿ . ಭಾನುವಾರ (ಜೂ.30) ಸಂಜೆ. ಅದು ಹಾಡಿನ ಸನ್ನಿವೇಶ. ಜೀಪ್‌ನಲ್ಲಿಯೇ ನಾಯಕ- ನಾಯಕಿ ಹಾಡುತ್ತಿದ್ದರು. ನಾಯಕ ಶಿವಣ್ಣ ಸ್ವತಃ ಜೀಪು ಚಲಾಯಿಸುತ್ತಿದ್ದರು.

ಆಗ ಸಂಭವಿಸಿದ್ದು ಅಪಘಾತ. ಜೀಪಿನ ಚಕ್ರಗಳು ಸಮುದ್ರದ ಉಸುಕಿನಲ್ಲಿ ಸಿಕ್ಕಿಕೊಂಡವು. ಅಲೆಗಳ ಭೋರ್ಗರೆತ. ಜೀಪಿಡೀ ಮುಳುಗಿತು. ಜೀಪಿನಲ್ಲಿದ್ದವರಿಗೆ ಪರದಾಟ. ಆಗ ಹಳ್ಳಿಯ ಜನ ನೆರವಿಗೆ ಧಾವಿಸಿದರು. ಹಗ್ಗಹಾಕಿ ಜೀಪನ್ನು ದಡಕ್ಕೆ ಎಳೆದರು. ಆ ಹೊತ್ತಿಗೆ ನಟಿ ಸ್ನೇಹಾ ಪ್ರಜ್ಞಾಶೂನ್ಯರಾಗಿದ್ದರು. ಶೂಟಿಂಗ್‌ ಅಲ್ಲಿಗೇ ನಿಂತಿತು.

ಮರುದಿನ ಬೆಳಗ್ಗೆ ಬೇರೆಡೆ ಶೂಟಿಂಗ್‌! ಸ್ಮೈಲ್‌! ನಗೆ ಮುಗುಳು

English summary
Shivraj and Neha Smiles after a cinematic escape from an accident

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada