»   » ಪುನೀತ್ ಮತ್ತು ರಮ್ಯಾ ಗೆ ಫಿಲಂಫೇರ್ ಪ್ರಶಸ್ತಿಯ ಗರಿ

ಪುನೀತ್ ಮತ್ತು ರಮ್ಯಾ ಗೆ ಫಿಲಂಫೇರ್ ಪ್ರಶಸ್ತಿಯ ಗರಿ

Subscribe to Filmibeat Kannada


ಬೆಂಗಳೂರು , ಆಗಸ್ಟ್ 02 : ನಟ ಪುನೀತ್ ಮತ್ತು ನಟಿ ರಮ್ಯಾ ಪ್ರಸಕ್ತ ಸಾಲಿನ ಫಿಲಂಫೇರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಭಾರತದ ಆಸ್ಕರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 54ನೇ ಫಿಲಂ ಫೇರ್ ಪ್ರಶಸ್ತಿ ಗಳನ್ನು ಪ್ರಕಟಿಸಲಾಗಿದೆ. ನಿರೀಕ್ಷೆಯಂತೆಯೇ ಮುಂಗಾರು ಮಳೆ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಆ.4ರಂದು ಹೈದರಾಬಾದ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಫಿಲಂಫೇರ್ ಪ್ರಶಸ್ತಿಗೆ ಪಾತ್ರರಾದವರು :

ಅತ್ಯುತ್ತಮ ನಟ : ಪುನೀತ್(ಅರಸು )
ಅತ್ಯುತ್ತಮ ನಟಿ : ರಮ್ಯಾ(ತನನಂ ತನನಂ )
ಅತ್ಯುತ್ತಮ ಚಿತ್ರ : ಮುಂಗಾರು ಮಳೆ
ಅತ್ಯುತ್ತಮ ನಿರ್ದೇಶಕ : ಇಂದ್ರಜಿತ್ ಲಂಕೇಶ್ (ಐಶ್ವರ್ಯ)
ಅತ್ಯುತ್ತಮ ಸಂಗೀತ ನಿರ್ದೇಶಕ : ಮನೋಮೂರ್ತಿ(ಮುಂಗಾರು ಮಳೆ)
ಅತ್ಯುತ್ತಮ ಪೋಷಕ ನಟ : ರಂಗಾಯಣ ರಘು(ಸೈನೈಡ್)
ಅತ್ಯುತ್ತಮ ಪೋಷಕ ನಟಿ : ಲೀಲಾವತಿ(ಕನ್ನಡದ ಕಂದ)
ಅತ್ಯುತ್ತಮ ಗೀತ ರಚನೆ : ಕೆ. ಕಲ್ಯಾಣ್ (ತನನಂ ತನನಂ)
ಅತ್ಯುತ್ತಮ ಗಾಯಕ : ಹೇಮಂತ್ (ಕಲ್ಲರಳಿ ಹೂವಾಗಿ)
ಅತ್ಯುತ್ತಮ ಗಾಯಕಿ : ಚಿತ್ರಾ(ಮೈ ಆಟೋಗ್ರಾಫ್)

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada