»   » ಬಾಲಿವುಡ್ ನಟ ಸಂಜಯ್ ದತ್ ಜೈಲು ವಾಸ ಹೇಗಿದೆ?

ಬಾಲಿವುಡ್ ನಟ ಸಂಜಯ್ ದತ್ ಜೈಲು ವಾಸ ಹೇಗಿದೆ?

Subscribe to Filmibeat Kannada


ಮುಂಬಯಿ, ಆಗಸ್ಟ್ 02 : ತೆರೆಮೇಲೆ ಮಿಂಚಿದ ಹೀರೋ ಸಂಜಯ್ ದತ್, ಈಗ ಸೆರೆಮನೆಯಲ್ಲಿ ಕೂತು ಸರಳು ಎಣಿಸುತ್ತಿದ್ದಾರೆ. ನಗರದ ಆರ್ಥರ್ ರೋಡ್ ಜೈಲಿನ ಕೊಠಡಿ ಸಂಖ್ಯೆ 10ರಲ್ಲಿ ಸಂಜಯ್ ದತ್, ಎರಡನೇ ದಿನ ಕಳೆದಿದ್ದಾರೆ.

ಇಲ್ಲಿ ಸಂಜಯ್ ದತ್ ಅವರಿಗೆ ರಾಜಭೋಗಕ್ಕೆ ಅವಕಾಶವಿಲ್ಲ. ಎಂಟು ಜನ ಇತರೆ ಖೈದಿಗಳ ಜೊತೆ ಶೌಚಾಲಯವನ್ನು ಬಳಸುತ್ತಿದ್ದಾರೆ. ಇತರೆ ಕೈದಿಗಳಂತೆಯೇ ಸಂಜಯ್ ದತ್ ಅವರನ್ನು ನಡೆಸಿಕೊಳ್ಳಲಾಗುತ್ತಿದೆ. ಫ್ಯಾನ್, ಸೊಳ್ಳೆ ಪರದೆ, ತಲೆದಿಂಬು, ಹಾಸಿಗೆ, ಬೆಡ್ ಶೀಟ್ ಇಲ್ಲದೇ ಸಂಜಯ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಕಂಬಳಿಯೊಂದನ್ನು ಜೈಲಿನ ಅಧಿಕಾರಿಗಳು ನೀಡಿದ್ದಾರೆ.

ಇತರೆ ಎಲ್ಲಾ ಕೈದಿಗಳಂತೆಯೇ, ಜೈಲಿನ ಊಟವನ್ನೇ ಸಂಜಯ್ ಸ್ವೀಕರಿಸುತ್ತಿದ್ದಾರೆ. ಜೈಲಿನ ಕೈದಿಗಳ ಸಮವಸ್ತ್ರವನ್ನೇ ಸಂಜಯ್ ಧರಿಸಿದ್ದು, ಸಂಜಯ್ ದತ್ ಗೆ ಸ್ವಲ್ಪ ದೂರದಲ್ಲಿಯೇ ಕುಖ್ಯಾತ ಪಾತಕಿ ಅಬುಸಲೇಂ ಇರುವ ಕೊಠಡಿ ಇದೆ.

ಆರ್ಥರ್ ರೋಡ್ ಜೈಲಿನಲ್ಲಿ ಕುಖ್ಯಾತ ಪಾತಕಿಗಳಿದ್ದು, ಆಗಾಗ ಇಲ್ಲಿ ಗದ್ದಲ, ಗಲಾಟೆಗಳು ಸಾಮಾನ್ಯ. ಗುರುವಾರದ ತನಕ ಇಲ್ಲಿ ಸಂಜಯ್ ಇರಲಿದ್ದಾರೆ. ನಂತರ ಮಹಾರಾಷ್ಟ್ರದಲ್ಲಿ ಎಲ್ಲಿ ಖಾಲಿಯಿದೆಯೋ ,ಆ ಜೈಲಿಗೆ ಅವರನ್ನು ಕಳಿಸಲಾಗುತ್ತದೆ. ಆಮೇಲೆ ಇತರೆ ಕೈದಿಗಳಂತೆಯೇ ಅವರು, ಯಾವುದಾದರೂ ಕೆಲಸವನ್ನು ಜೈಲಿನಲ್ಲಿ ಮಾಡಬೇಕಾಗುತ್ತದೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada