»   » ಶಿವಣ್ಣನ ಮೊಬೈಲ್ ಬೆಲೆ ಕೇವಲ 3ಲಕ್ಷ ರೂಪಾಯಿ ಮಾತ್ರ!

ಶಿವಣ್ಣನ ಮೊಬೈಲ್ ಬೆಲೆ ಕೇವಲ 3ಲಕ್ಷ ರೂಪಾಯಿ ಮಾತ್ರ!

Posted By:
Subscribe to Filmibeat Kannada


ಸ್ನೇಹದ ಬಂಧಗಳು ಕನ್ನಡ ಚಿತ್ರರಂಗದಲ್ಲಿ ಈಗೀಗ ಹೆಚ್ಚುತ್ತಿದೆ. ಒಬ್ಬರಲ್ಲ, ಎಲ್ಲರೂ ಗೆಲ್ಲೋಣ.. ಎಲ್ಲರೂ ಚಿತ್ರರಂಗದಲ್ಲಿ ಉಳಿಯೋಣ ಎನ್ನುವ ಮನೋಭಾವ ಚಿತ್ರರಂಗದಲ್ಲಿ ಚಿಗುರುತ್ತಿದೆ. ದ್ವೇಷ, ಅಸೂಯೆಗಳ ಜಾಗದಲ್ಲಿ ಒಲವು ಮೂಡುತ್ತಿದೆ. ಗುಡ್.

ಹೊಸ ಹುಡುಗರಾದ ಗಣೇಶ್, ವಿಜಯ್, ಪ್ರೇಮ್, ತರುಣ್ ಇವರೆಲ್ಲರೂ ಆಪ್ತ ಸ್ನೇಹಿತರು. ಇನ್ನು ರವಿಚಂದ್ರನ್, ಅಂಬರೀಷ್ ಮತ್ತು ವಿಷ್ಣುವರ್ಧನ್ ಸ್ನೇಹ ಎಲ್ಲರಿಗೂ ಗೊತ್ತು. ಸುದೀಪ್ ಮತ್ತು ಶಿವರಾಜ್ ಕುಮಾರ್ ಸ್ನೇಹದ ಬಳ್ಳಿ ವ್ಯಾಪಕವಾಗಿ ಹಬ್ಬುತ್ತಿದೆ. ಶಾಂತಿ ನಿವಾಸದಲ್ಲಿ ಅಭಿನಯಿಸಿ, ಒಂದು ಹಾಡು ಹಾಡಿದ ಶಿವಣ್ಣನ ಬಗ್ಗೆ ಸುದೀಪ್ ಗೆ ಎಲ್ಲಿಲ್ಲದ ಅಕ್ಕರೆ. ಅವರಿಗೆ ಸುದೀಪ್, ಸುಮಾರು 3ಲಕ್ಷ ಮೌಲ್ಯದ ಮೊಬೈಲನ್ನು ಕಾಣಿಕೆಯಾಗಿ ನೀಡಿದ್ದಾರೆ.

ಸದಾಕಾಲ ಈ ಮೊಬೈಲ್ ನಿಮ್ಮ ಬಳಿ ಇರಬೇಕು. ದುಬಾರಿ ಬೆಲೆಯ ಮೊಬೈಲ್ ಕಳೆದು ಹೋಗುತ್ತದೆ ಎಂದು ಮನೆಯಲ್ಲಿ ಬಚ್ಚಿಡುವ ಅಗತ್ಯವಿಲ್ಲ. ಕಳೆದು ಹೋದರೂ ಚಿಂತೆ ಮಾಡಬೇಡಿ. ದಯವಿಟ್ಟು ನನ್ನ ಈ ಮೊಬೈಲ್ ನಿಮ್ಮ ಜೊತೆ ಸದಾ ಇರಲಿ ಎಂದು ಸುದೀಪ್, ಪ್ರೀತಿಯಿಂದ ಒತ್ತಾಯಿಸಿದ್ದಾರೆ. ಶಿವಣ್ಣ ಆಗಲಿ ಎಂದು ತಲೆ ಅಲ್ಲಾಡಿಸಿದ್ದಾರೆ.

ಇನ್ನೊಂದು ಸುದ್ದಿ :

ಸುದೀಪ್ ಅಭಿನಯದ ಗೂಳಿಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ನಿರ್ಮಾಪಕ ರಾಮು ಪಾಲಿಗೆ ಗೂಳಿಗೆಲುವು ಅತಿ ಮುಖ್ಯ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada