»   » ಕಿಚ್ಚ ಸುದೀಪ್‌ಗೆ ಜನ್ಮದಿನದ ಶುಭ ಹಾರೈಸಿ!

ಕಿಚ್ಚ ಸುದೀಪ್‌ಗೆ ಜನ್ಮದಿನದ ಶುಭ ಹಾರೈಸಿ!

Posted By:
Subscribe to Filmibeat Kannada


ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸದಭಿರುಚಿಯ ಚಿತ್ರಗಳಲ್ಲಿ ನಟಿಸಿ, ಕೆಲವೊಂದನ್ನು ನಿರ್ದೇಶಿಸಿದ ಸುದೀಪ್ ಸರೋವರ್‌ರ ಜನುಮ ದಿನ ಇಂದು. ನಟನೆಯಲ್ಲಷ್ಟೇ ಅಲ್ಲದೆ, ನಿರ್ದೇಶನದಲ್ಲೂ ಸೈ ಎನ್ನಿಸಿಕೊಂಡ ಕಿಚ್ಚನಿಗೆ ಜನ್ಮದಿನದ ಶುಭಾಷಯಗಳು.

ಇಂದು ಸುದೀಪ್‌ 34ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತಮ್ಮ ‘ಶಾಂತಿ’ ನಿವಾಸದಲ್ಲಿ ನೂರಾರು ಅಭಿಮಾನಿಗಳ ಮಧ್ಯೆ ಜನುವ ದಿನವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಚಿತ್ರರಂಗದ ಹಲವು ಗಣ್ಯರು, ನಟರು ಅವರಿಗೆ ಶುಭ ಹಾರೈಸಿದರು. ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಗುಣಾತ್ಮಕ ಚಿತ್ರಗಳಲ್ಲಿ ನಟಿಸುವುದಾಗಿ ಅಭಿಮಾನಿಗಳಿಗೆ ಬರವಸೆ ನೀಡಿದರು.

ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ‘ಸ್ಪರ್ಶ’ ಇವರು ನಟಿಸಿದ ಮೊದಲ ಚಿತ್ರ. ಆನಂತರ ಹುಚ್ಚ, ರಂಗ ಎಸ್ಸೆಸ್ಸೆಲ್ಸಿ, ಕಿಚ್ಚ, ನಲ್ಲ, ಧಮ್, ಸ್ವಾತಿಮುತ್ತು ಅವರು ನಟಿಸಿದ ಕೆಲವು ಚಿತ್ರಗಳು. ಮೈ ಆಟೋಗ್ರಾಫ್, ನಂ.73 ಶಾಂತಿನಿವಾಸ ಅವರ ನಿರ್ದೇಶನದ ಚಿತ್ರಗಳು. ಸ್ವಾತಿಮುತ್ತು ಚಿತ್ರದಲ್ಲಿನ ಅವರ ಪ್ರೌಢ ಅಭಿನಯ ಕಮಲ್ ಹಾಸನ್‌ರನ್ನು ನೆನಪಿಸುತ್ತದೆ.

ಅವರ ಮುಂಬರುವ ಚಿತ್ರಗಳು ಈ ರೀತಿಯಾಗಿವೆ- ಮಹೇಶ್ ನಿರ್ದೇಶನದ ‘ಮುಸ್ಸಂಜೆಯ ಮಾತು’, ಚಿ.ಗುರುದತ್‌ರ ‘ಕಾಮಣ್ಣನ ಮಕ್ಕಳು’, ರಾಮು ಎಂಟರ್ ಪ್ರೈಸಸ್‌‍ನ ‘ಗೂಳಿ’.

ನಿಮ್ಮ ನೆಚ್ಚಿನ ಕಿಚ್ಚ ಸುದೀಪ್ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada