»   » ನಾಗಪ್ಪ ಕುಟುಂಬದ ಜೊತೆ ಅಣ್ಣಾವ್ರು ಕಳೆದ ಒಂದು ತಾಸು...

ನಾಗಪ್ಪ ಕುಟುಂಬದ ಜೊತೆ ಅಣ್ಣಾವ್ರು ಕಳೆದ ಒಂದು ತಾಸು...

Subscribe to Filmibeat Kannada

ಬೆಂಗಳೂರು : ಯೋಚನೆ ಮಾಡಬೇಡಿ, ನಾಗಪ್ಪನವರಿಗೆ ವೀರಪ್ಪನ್‌ ಸಸ್ಯಾಹಾರವನ್ನೇ ಕೊಡ್ತಾನೆ !ನಾಗಪ್ಪನವರ ಹೆಂಡತಿ- ಮಕ್ಕಳಿಗೆ ಇಂಥಾ ಹತ್ತು ಹಲವು ಮಾಹಿತಿ ಕೊಟ್ಟು , ಅವರು ಯಾವುದೇ ತೊಂದರೆಯಿಲ್ಲದೆ ಬಿಡುಗಡೆಯಾಗಿ ಬರ್ತಾರೆ ಅಂತ ಅಣ್ಣಾವ್ರು ಹೇಳಿದ ನಂತರ ಬಸವಳಿದ ನಾಗಪ್ಪನವರ ಕುಟುಂಬಕ್ಕೆ ಕೊಂಚ ನೆಮ್ಮದಿ.ಸದಾಶಿವನಗರದ ವರನಟ ರಾಜ್‌ ಮನೆಯಲ್ಲಿ ಶನಿವಾರ ಒಂದು ತಾಸು ಮುಚ್ಚಿದ ಕೋಣೆಯಲ್ಲಿ ನಾಗಪ್ಪನವರ ಕುಟುಂಬ ಮಾತಾಡಿ, ಬಂದಿತು. ಏನೇನು ಮಾತುಕತೆ ನಡೆಯಿತು ಎಂಬುದರ ಪೂರ್ಣ ಪಾಠ ಅಲಭ್ಯ. ನಾಗಪ್ಪನವರ ಕುಟುಂಬದವರ ಪ್ರಕಾರ, ಊಟ- ಆರೋಗ್ಯ ವಗೈರೆ ವಿಚಾರಗಳ ಬಗ್ಗೆ ಹಾಗೂ ವೀರಪ್ಪನ್‌ ವರ್ತನೆ ಕುರಿತು ಅಣ್ಣಾವ್ರ ಅನುಭವವನ್ನು ಕೇಳಿ ಪಡೆಯುವುದು ಈ ಮಾತುಕತೆಯ ಉದ್ದೇಶವಾಗಿತ್ತು. ನಾಗಪ್ಪನವರ ಕುಟುಂಬಕ್ಕೆ ಅಣ್ಣಾವ್ರು ಹೇಳಿರುವ ಕೆಲವು ವಿಚಾರಗಳು....

  • ವೀರಪ್ಪನ್‌ ಸಾಮಾನ್ಯವಾಗಿ ರಾತ್ರಿ ಹೊತ್ತು ಜಾಗ ಬದಲಾಯಿಸುತ್ತಾನೆ. ಬಹುತೇಕ ನೀರು ದೊರೆಯುವ ಸ್ಥಳದಲ್ಲಿ ಬಿಡಾರ ಹೂಡುತ್ತಾನೆ.
  • ಮಾಂಸಾಹಾರ ತಿನ್ನಲೇಬೇಕು ಅಂತ ಬಲವಂತ ಮಾಡೋದಿಲ್ಲ. ಅನ್ನ, ಸಾಂಬಾರಿನಂಥ ಸಸ್ಯಾಹಾರವನ್ನ ಕೊಡುತ್ತಾನೆ.
  • ತನ್ನ ಉದ್ದೇಶ ಈಡೇರುವವರೆಗೆ ಪಟ್ಟು ಬಿಡುವ ಆಸಾಮಿ ಅವನಲ್ಲ.
  • ಒತ್ತೆಯಾಳುಗಳ ಆರೋಗ್ಯದ ಬಗೆಗೆ ಆತ ನಿಗಾ ವಹಿಸುತ್ತಾನೆ.
ಮಧುಮೇಹದ ತೊಂದರೆಯಿರುವ ನಾಗಪ್ಪ ಹೆಚ್ಚು ದೂರ ನಡೆಯಲು ಅಶಕ್ತರು. ಇದೇ ಕಾರಣಕ್ಕೆ ಆತಂಕಗೊಂಡಿದ್ದ ಪರಿಮಳ ನಾಗಪ್ಪ ಮತ್ತು ಅವರ ಮಕ್ಕಳಿಗೆ ರಾಜ್‌ ಅವರ ಅನುಭವದ ಮಾತುಗಳಿಂದ ಕೊಂಚ ಸಮಾಧಾನವಾಗಿದೆ. ಊಟ- ತಿಂಡಿ ಬಿಟ್ಟಿರುವ ನಾಗಪ್ಪನವರ ಕುಟುಂಬಕ್ಕೆ ಹಣ್ಣಿನ ರಸವೇ ಆಹಾರ ; ಮನೆಯಾಡೆಯ ಬರುವವರೆಗೆ ಊಟ ಮಾಡೋದಿಲ್ಲ ಎಂಬುದು ಅವರ ಹಟ !

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada