»   » ರೋಜಾ ಕೊನೆಗೂ ಮದುವೆಯಾಗಿದ್ದಾರೆ

ರೋಜಾ ಕೊನೆಗೂ ಮದುವೆಯಾಗಿದ್ದಾರೆ

Posted By: Staff
Subscribe to Filmibeat Kannada

ಹತ್ತು ವರ್ಷಗಳ ಪ್ರೀತಿ ಮದುವೆ ರೂಪ ಪಡೆದದ್ದು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ. ಹರಸಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು , ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಲ್ಲಿದ್ದರು. ವಧು- ರೋಜಾ, ವರ- ಸೆಲ್ವಮಣಿ.

ನಾನು ಮದುವೆ ಆಗ್ತೀನಿ ಅಂತಷ್ಟೇ ಸುದ್ದಿಗೋಷ್ಠಿಯಲ್ಲಿ ಹೇಳಿ, ಗಂಡನ ಹೆಸರು ಹೇಳಲು ನಾಚಿಕೊಂಡಿದ್ದ ರೋಜಾ, ಹತ್ತು ವರ್ಷಗಳ ಹಿಂದೆ ತೆರೆಗೆ ಬಂದದ್ದರ ರೂವಾರಿಯೇ ಈ ಸೆಲ್ವಮಣಿ. ತಮಿಳು ಸಿನಿಮಾ 'ಚೆಂಬರುತಿ"ಯಲ್ಲಿ ರೋಜಾ ಮಿಂಚಿದ್ದೇ ತಡ, ದಕ್ಷಿಣ ಭಾರತದ ಸಿನಿಮಾಗಳು ಈಕೆಗೆ ರೆಡ್‌ ಕಾರ್ಪೆಟ್‌ ಹಾಸಿದವು. ಈಕೆ ನಟಿಸಿರುವ ಸಿನಿಮಾಗಳ ಸಂಖ್ಯೆ 200ಕ್ಕೂ ಹೆಚ್ಚು ಅನ್ನೋದೇ ಇದಕ್ಕೆ ಸಾಕ್ಷಿ. ಇವತ್ತಿಗೂ ಮೇನ್‌ಸ್ಟ್ರೀಮ್‌ನಲ್ಲಿ ಸಾಕಷ್ಟು ಅವಕಾಶಗಳಿರುವ ರೋಜಾ ಏಕಾಏಕಿ ಮದುವೆ ನಿರ್ಣಯಕ್ಕೆ ಬರಲಿಲ್ಲ. ಮದುವೆಗೆ ಮುನ್ನ ಹತ್ತು ವರ್ಷಗಳ ಕಾಲ ಸೆಲ್ವಮಣಿಯನ್ನು ಅರ್ಥ ಮಾಡಿಕೊಂಡಿದ್ದಾರೆ !

ಈಕೆ ಕೊಟ್ಟಿದ್ದ ಚೆಕ್‌ ಎಗರಿ ಬಿದ್ದ ಕಾರಣ ಕೋರ್ಟಿನ ಕಟಕಟೆ ಹತ್ತುವ ಪರಿಸ್ಥಿತಿ ಬಂದಾಗ, ಸೆಲ್ವಮಣಿ ಖುದ್ದು ಮುಂದೆ ನಿಂತು ಸಮಸ್ಯೆಯನ್ನು ಬೇಲಿಯಿಂದ ಬಟ್ಟೆ ತೆಗೆವಷ್ಟು ನಾಜೂಕಾಗಿ ಬಿಡಿಸಿದರು. ಅದಾದ ನಂತರ ಮದುವೆಯಾಗಿದೆ.

ಮದುವೆ ಆಗುವಾಗ ಖಂಡಿತ ಹೇಳಿಯೇ ಆಗುತ್ತೇನೆ ಅಂತ ಸುದ್ದಿಗಾರರಿಗೆ ಮಾಡಿದ್ದ ಪ್ರಾಮಿಸ್ಸನ್ನು ಮಾತ್ರ ರೋಜಾ ಮುರಿದಿದ್ದಾರೆ. ಈ ಪ್ರಾಮಿಸ್ಸನ್ನು ಈಡೇರಿಸಿದ್ದರೆ, ತಿರುಪನ ತಿಮ್ಮಪ್ಪನ ಸನ್ನಿಧಿ ತುಂಬೆಲ್ಲಾ ಸುದ್ದಿಗಾರರೇ ತುಂಬಿರುತ್ತಿದ್ದರೋ ಏನೋ? ಅಂದಹಾಗೆ, ರೋಜಾ ಮದುವೆ ಆದದ್ದು ಆಗಸ್ಟ್‌ 21ರಂದು. ಈಗವರು ಇನ್ನೂ ಹನಿಮೂನ್‌ನಲ್ಲಿದ್ದಾರೆ !

English summary
Roja in on Honeymoon

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada