For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ ಮಾಂತ್ರಿಕ ಶಾರೂಖ್‌ಖಾನ್‌ಗೀಗ 40

  By Staff
  |

  ಮುಂಬಯಿ : ಹಿಂದಿ ಚಿತ್ರರಂಗದ ಸ್ಥಿರ ಯಶಸ್ಸಿನ ತಾರೆ ಎಂದೇ ಗುರ್ತಿಸಲ್ಪಡುವ ಶಾರೂಖ್‌ ಖಾನ್‌ ಬುಧವಾರ 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

  ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತಮ್ಮ್ಮ ಬದುಕಿನ ಈ ನಾಲ್ಕು ದಶಕಗಳ ನಂತರ ಧೂಮಪಾನಕ್ಕೆ ಬೈಬೈ ಹೇಳುವ ನಿಟ್ಟಿನಲ್ಲಿ ಯೋಚಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ.

  ನನ್ನ ಬದುಕಿನಲ್ಲಿ 60, 80, 100 ಮತ್ತು 125ನೇ ವರ್ಷಗಳನ್ನು ಕರುಣಿಸು, ಅವುಗಳನ್ನು ಸವಿಯುವ ಅವಕಾಶ ಕಲ್ಪಿಸು ಎಂಬುದು ಭಗವಂತನಲ್ಲಿ ನನ್ನ ಪುಟ್ಟ ಪ್ರಾರ್ಥನೆಯಾಗಿದೆ ಎಂದು ಶಾರೂಖ್‌ ಅಭಿಪ್ರಾಯಪಟ್ಟಿದ್ದಾರೆ.

  ಹೀರೋ ನಂ.1 : ಅಮಿತಾಭ್‌ ಬಚ್ಚನ್‌ ನಂತರ ಹಿಂದಿ ಚಿತ್ರರಂಗ ಕಂಡ ಅಪರೂಪದ ಯಶಸ್ವೀ ನಟ ಎಂಬ ಖ್ಯಾತಿ ಶಾರೂಖ್‌ ಅವರದು. ಯಾವ ಗಾಡ್‌ಫಾದರ್‌ಗಳ ನೆರವಿಲ್ಲದೆ, ಕೇವಲ ಪ್ರತಿಭೆ ಮಾತ್ರದಿಂದಲೇ ಚಿತ್ರರಂಗದಲ್ಲಿ ಬೆಳೆದು ಬಂದ ಅವರು, ಶಾಲಾ ಕಾಲೇಜು ದಿನಗಳಿಂದಲೂ ಅಭಿನಯದಲ್ಲಿ ಆಸಕ್ತಿ ಹೊಂದಿದ್ದರು. ಬೀದಿ ನಾಟಕಗಳ ಮೂಲಕ ಅಭಿನಯದ ಪಟ್ಟು ಗಳನ್ನು ಕಲಿತವರು.

  ದೂರದರ್ಶನದ ರಾಷ್ಟ್ರೀಯ ಜಾಲದಲ್ಲಿ ಪ್ರಸಾರವಾಗುತ್ತಿದ್ದ ‘ ಸರ್ಕಸ್‌’ ಎಂಬ ಧಾರಾವಾಹಿಯ ಜನಪ್ರಿಯತೆ, ದಿನಬೆಳಗಾಗುವುದರೊಳಗೆ ಬಾಲಿವುಡ್‌ನಲ್ಲಿ ಶಾರೂಖ್‌ ಖಾನ್‌ ಎಂಬ ತಾರೆಯಾಂದನ್ನು ಸೃಷ್ಟಿಸಿತ್ತು. ಆಮೇಲೆ ಯಶಸ್ಸಿನ ಕಥೆ ಮುಂದುವರೆಯಿತು. ವೀರ್‌ ಝರಾ, ಮೈ ಹೂಂ ನಾ, ಸ್ವದೇಸ್‌ ... ಮತ್ತಿತರ ಚಿತ್ರಗಳು ಬಾಲಿವುಡ್‌ನಲ್ಲಿ ಮಿಂಚಿವೆ.

  ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ಶಾರೂಖ್‌, ಮತ್ತಷ್ಟು ಎತ್ತರವನ್ನು ತಲುಪಲಿ ಎನ್ನುವುದು ಅಭಿಮಾನಿಗಳ ಆಶಯ.

  (ಏಜನ್ಸೀಸ್‌)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X