»   » ರಾಜ್ಯೋತ್ಸವ ಮಾಸದಲ್ಲಿ ಬಂದ ‘ಕನ್ನಡದ ಕಂದ’!

ರಾಜ್ಯೋತ್ಸವ ಮಾಸದಲ್ಲಿ ಬಂದ ‘ಕನ್ನಡದ ಕಂದ’!

Subscribe to Filmibeat Kannada


ಇದು ಸಂಗೀತದ ಚಿತ್ರ, ಸಾಹಸದ ಚಿತ್ರ, ಭಾವನಾತ್ಮಕತೆಯ ಚಿತ್ರ ಎನ್ನುವ ಲೀಲಾವತಿ, ಚಿತ್ರಕ್ಕೆ ತಾವೇ ಕಷ್ಟಪಟ್ಟು ಕತೆ ಬರೆದಿದ್ದಾರೆ.

ರಾಜ್ಯೋತ್ಸವ ಹಿನ್ನೆಲೆಯಲ್ಲಿ ನವೆಂಬರ್‌ ತಿಂಗಳಲ್ಲಿಯೇ ‘ಕನ್ನಡದ ಕಂದ’ ತೆರೆಗೆ ಬರಲಿದ್ದಾನೆ. ಆ ಮೂಲಕ ಡ್ಯಾನ್ಸ್‌ ಕಿಂಗ್‌ ವಿನೋದ್‌ ರಾಜ್‌, ಆರು ವರ್ಷಗಳ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಸೆನ್ಸಾರ್‌ ಮಂಡಳಿ ‘ಯು’ ಪ್ರಮಾಣ ಪತ್ರ ನೀಡಿ, ಚಿತ್ರ ಪ್ರದರ್ಶನಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದೆ. ಜೊತೆಗೆ ಪ್ರಶಂಸೆ ವ್ಯಕ್ತಪಡಿಸಿದೆ.

ಲೀಲಮ್ಮ ಅರ್ಥಾತ್‌ ಲೀಲಾವತಿ ಚೆನ್ನೈನಲ್ಲಿನ ತಮ್ಮ ಇನ್ನೊಂದು ಆಸ್ತಿ ಮಾರಾಟ ಮಾರಿ, ಪುತ್ರನ ಚಿತ್ರಕ್ಕೆ ದುಡ್ಡು ಸುರಿದಿದ್ದಾರೆ. ‘ಆಸ್ತಿ ಹೋಯಿತು ಅನ್ನೋದಕ್ಕಿಂತ ಮಗನ ಚಿತ್ರ ಮಾಡಿದ ಸಾರ್ಥಕತೆಯೇ ದೊಡ್ಡದಲ್ವಾ’ ಅನ್ನುತ್ತಾರವರು.

ಇದು ಸಂಗೀತದ ಚಿತ್ರ, ಸಾಹಸದ ಚಿತ್ರ, ಭಾವನಾತ್ಮಕತೆಯ ಚಿತ್ರ ಎನ್ನುವ ಲೀಲಾವತಿ, ಚಿತ್ರಕ್ಕೆ ತಾವೇ ಕಷ್ಟಪಟ್ಟು ಕತೆ ಬರೆದಿದ್ದಾರೆ.

‘ಗೆಜ್ಜೆನಾದ’ ದಂತಹ ಹಿಟ್‌ ಚಿತ್ರ ನೀಡಿ, ನಂತರ ನಾಪತ್ತೆಯಾಗಿದ್ದ ವಿಜಯಕುಮಾರ್‌ ಈ ಚಿತ್ರದ ನಿರ್ದೇಶಕರು. ದಕ್ಷಾ, ಕಿಶೋರ್‌, ರೇಶ್ಮಾ, ಮನಮೋಹನ್‌ ರಾಯ್‌, ಬಬಿತಾ, ನಾಗಶೇಖರ್‌ ತಾರಾಗಣದಲ್ಲಿದ್ದು, ಗುರುನಾಥ್‌ ಸಂಗೀತ, ಅಬ್ದುಲ್‌ ರೆಹಮಾನ್‌ ಛಾಯಾಗ್ರಹಣ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada