»   » ಅಮಿತಾಭ್‌ ವಿಶ್ರಾಂತಿ : ನಿರ್ಮಾಪಕರಿಗೆ ಸದ್ಯಕ್ಕಿಲ್ಲ ಶಾಂತಿ?

ಅಮಿತಾಭ್‌ ವಿಶ್ರಾಂತಿ : ನಿರ್ಮಾಪಕರಿಗೆ ಸದ್ಯಕ್ಕಿಲ್ಲ ಶಾಂತಿ?

Subscribe to Filmibeat Kannada

ಮುಂಬೈ : ಅಮಿತಾಭ್‌ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳಿಗಿಂತಲೂ, ಅವರನ್ನು ನೆಚ್ಚಿಕೊಂಡಿರುವ ಉದ್ಯಮದ ಮಂದಿಗೆ ಹೆಚ್ಚು ಆತಂಕವಾಗಿದೆ!

ಅಮಿತಾಭ್‌ ಮುಂದಿನ ಒಂದು ವಾರದಲ್ಲಿ ಚೇತರಿಸಿಕೊಳ್ಳುವರು. ಆದರೆ ಅವರಿಗೆ ಒಂದು ತಿಂಗಳ ವಿಶ್ರಾಂತಿ ಅತ್ಯಗತ್ಯ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹಿರಿಯಣ್ಣನ ಅನಾರೋಗ್ಯದಿಂದ ಬಾಲಿವುಡ್‌ ತತ್ತರಿಸಿದೆ.

ಸದ್ಯಕ್ಕೆ ಹತ್ತು ಚಿತ್ರಗಳಲ್ಲಿ ಅಮಿತಾಭ್‌ ನಟಿಸುತ್ತಿದ್ದು, 270ಕೋಟಿ ರೂ.ಗಳನ್ನು ನಿರ್ಮಾಪಕರು ಅವರ ಮೇಲೆ ಹೂಡಿದ್ದಾರೆ. ಜನಪ್ರಿಯ ಟೀವಿ ಕಾರ್ಯಕ್ರಮ ‘ಕೌನ್‌ಬನೇಗಾ ಕರೋಡ್‌ಪತಿ’ಯ ಚಿತ್ರೀಕರಣ ಅನಿವಾರ್ಯವಾಗಿ ನಿಲ್ಲುವಂತಾಗಿದೆ.

ಈ ವರ್ಷ ನಾಲ್ಕು ಯಶಸ್ವಿ ಚಿತ್ರಗಳನ್ನು ನೀಡಿದ ಬಚ್ಚನ್‌ ಅವರ ಹೊಸ ಚಿತ್ರ ‘ಏಕ್‌ ಅಜನಬಿ’ ಡಿ. 9ರಂದು ತೆರೆಕಾಣಲಿದೆ. ಮತ್ತೊಂದು ಚಿತ್ರ ‘ಫ್ಯಾಮಿಲಿ’ ಡಿ.21ರಂದು ತೆರೆಕಾಣಲಿದೆ.

ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕರಳು ಬೇನೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಮಿತಾಭ್‌, ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾವುದೇ ಕ್ಯಾನ್ಸ್‌ರ್‌ ರೀತಿಯ ಲಕ್ಷಣಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ರಣಧೀರ್‌ ಕಪೂರ್‌ ಆಸ್ಪತ್ರೆಗೆ : ಅಮಿತಾಭ್‌ ಒಂದೆಡೆ ಹಾಸಿಗೆ ಹಿಡಿದಿದ್ದಾರೆ. ಇನ್ನೊಂದೆಡೆ ಬಾಲಿವುಡ್‌ನ ಇನ್ನೊಬ್ಬ ಹಿರಿಯ ನಟ ರಣಧೀರ್‌ ಕಪೂರ್‌, ನ.29ರಂದು ತೀವ್ರ ಹೊಟ್ಟೆ ನೋವು ಮತ್ತು ನಿಶ್ಯಕ್ತಿಯಿಂದಾಗಿ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಖ್ಯಾತ ನಟಿಯರಾದ ಕರಿಶ್ಮಾ ಕಪೂರ್‌ ಮತ್ತು ಕರೀನಾ ಕಪೂರ್‌ ಅವರ ತಂದೆಯೂ ಆಗಿರುವ ರಣಧೀರ್‌ ಕಪೂರ್‌ ಅವರನ್ನು, ಈಗ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada