»   » ನಾನೀಗ ನಾಯಕ - ಪ್ರೇಮ್‌

ನಾನೀಗ ನಾಯಕ - ಪ್ರೇಮ್‌

Subscribe to Filmibeat Kannada

‘ಜೋಗಿ’ ಚಿತ್ರದ ಮೂಲಕ ಮನೆಮಾತಾಗಿರುವ ನಿರ್ದೇಶಕ ಪ್ರೇಮ್‌, ತಮ್ಮ ಹೊಸ ಚಿತ್ರದಲ್ಲಿ ನಾಯಕರಾಗಿ ಬಡ್ತಿ ಪಡೆಯುತ್ತಿದ್ದಾರೆ.

ಅಶ್ವಿನಿ ರಾಮಪ್ರಸಾದ್‌ ನಿರ್ದೇಶನದ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ಮೂಲಕ ನಾಯಕರಾಗುತ್ತಿರುವ ಸಂಗತಿಯನ್ನು ಪ್ರೇಮ್‌, ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ. ಚಿತ್ರದ ಚಿತ್ರೀಕರಣ ಜನವರಿಯಿಂದ ಆರಂಭವಾಗಲಿದೆ.

ನಾಯಕನಾಗುವ ಹಂಬಲದಿಂದ ಚಿತ್ರರಂಗಕ್ಕೆ ಬಂದ ನನ್ನ ಕನಸು, ಈಗ ನನಸಾಗುತ್ತಿದೆ. ಈ ಚಿತ್ರದ ಯಶಸ್ಸಿನ ಬಗ್ಗೆ ನನಗೆ ಭರವಸೆ ಇದೆ ಎನ್ನುತ್ತಾರೆ ಪ್ರೇಮ್‌.

ಆರ್‌.ಪಿ.ಪಟ್ನಾಯಕ್‌ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕರಿಯಾ, ಎಕ್ಸ್‌ಕ್ಯೂಸ್‌ ಮೀ ಮತ್ತು ಜೋಗಿ ಚಿತ್ರಗಳ ಮೂಲಕ ಹ್ಯಾಟ್ರಿಕ್‌ ನಿರ್ದೇಶಕ ಎಂಬ ಹೆಸರು ಗಳಿಸಿರುವ ಪ್ರೇಮ್‌ರ ಹೊಸ ಚಿತ್ರದ ಬಗ್ಗೆ ಗಾಂಧಿನಗರ ಕುತೂಹಲಗೊಂಡಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada