»   » ‘ಪ್ಯಾರೀಸ್‌ ಪ್ರಣಯ’ ಚಿತ್ರದ ನಾಯಕ ಮುಖರ್ಜಿ ಬಂಧನ

‘ಪ್ಯಾರೀಸ್‌ ಪ್ರಣಯ’ ಚಿತ್ರದ ನಾಯಕ ಮುಖರ್ಜಿ ಬಂಧನ

Posted By:
Subscribe to Filmibeat Kannada

ಬೆಂಗಳೂರು : ವರದಕ್ಷಿಣೆಗಾಗಿ ಕಾಡಿದ ಆರೋಪದ ಮೇಲೆ, ‘ಪ್ಯಾರೀಸ್‌ಪ್ರಣಯ’ ಚಿತ್ರದ ನಾಯಕ ಮತ್ತು ನಗರದ ರೂಪದರ್ಶಿ ರಘು ಮುಖರ್ಜಿ ಅವರನ್ನು ಚೆನ್ನೈಪೊಲೀಸರು ಬಂಧಿಸಿದ್ದಾರೆ.

ಯಲಹಂಕದಲ್ಲಿರುವ ಮುಖರ್ಜಿ ನಿವಾಸದಲ್ಲಿಯೇ ಬಂಧನಕಾರ್ಯ ನಡೆದಿದೆ. ತಮ್ಮ ಪತ್ನಿಯಾಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಅವರು, ದಾಂಪತ್ಯ ವಿಚ್ಛೇದನಕ್ಕೆ ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಇತ್ತೀಚೆಗಷ್ಟೇ ಅರ್ಜಿ ಸಲ್ಲಿಸಿದ್ದರು.

ಈ ಮಧ್ಯೆ ಅವರ ಪತ್ನಿ ದೀಪಾ ಅವರು ನೀಡಿದ ದೂರಿನನ್ವಯ ಮುಖರ್ಜಿ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್‌ ‘ಪ್ಯಾರೀಸ್‌ ಪ್ರಣಯ’ ಚಿತ್ರದ ನಿರ್ದೇಶಕರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada