»   » ಬಿಪಾಶಾ ಬಸು ತಂಗಿ ಬೆಂಗಳೂರಲ್ಲೇ ತಂಗಿದ್ದಾಳೆ!

ಬಿಪಾಶಾ ಬಸು ತಂಗಿ ಬೆಂಗಳೂರಲ್ಲೇ ತಂಗಿದ್ದಾಳೆ!

Subscribe to Filmibeat Kannada


ಬೆಂಗಳೂರಿಗೂ ಮತ್ತು ಬಿಪಾಶಾ ಬಸುಗೂ ಬಿಡಿಸಲಾರದ ಬಂಧ. ಈ ಮಾತು ಅವರ ಬಾಯಿಂದಲೇ ಹೊರಬಿದ್ದಿದೆ.

‘ಚಿತ್ರೀಕರಣ ಸೇರಿದಂತೆ ಬೆಂಗಳೂರಿನಲ್ಲಿ ಸಾಕಷ್ಟು ಸಲ ತಂಗಿದ್ದೇನೆ. ನನಗೆ ಈ ಊರು ಸಕತ್ತು ಇಷ್ಟವಾಗಿದೆ. ಇಸ್ರೊದಲ್ಲಿ ಕೆಲಸ ಮಾಡುವ ಮಲಯಾಳಿಯಾಬ್ಬನನ್ನು ಮದುವೆಯಾಗಿರುವ ನನ್ನ ಸಹೋದರಿ ಇಲ್ಲಿಯೇ ಇದ್ದಾಳೆ. ಹೀಗಾಗಿ ನಾನು ಬಂದು ಹೋಗುವ ಪ್ರಕ್ರಿಯೆ ನಡೆಯುತ್ತಲೇ ಇದೆ’ ಎಂದಿದ್ದಾರೆ ಬಿಪಾಶಾ.

ಕನ್ನಡ, ತೆಲುಗು, ತಮಿಳು ಸೇರಿದಂತೆ ಪ್ರಾದೇಶಿಕ ಭಾಷೆಯ ಚಲನಚಿತ್ರಗಳಲ್ಲಿ ನಟಿಸುವ ಹಂಬಲ ನನಗೆ ಮೊದಲಿನಿಂದಲೂ ಇದೆ. ಕಾಲ ಕೂಡಿ ಬಂದಾಗ ನೋಡೋಣ ಎಂದು ಬಿಪಾಶಾ ಹೇಳಿದ್ದಾರೆ. ಈ ಮಾತು ಕೇಳಿಯೇ ಪ್ರೇಕ್ಷಕರು ರೋಮಾಂಚನಗೊಂಡಿದ್ದಾರೆ!

ತಮ್ಮ ಅಭಿನಯದ ‘ಕಾರ್ಪೋರೇಟ್‌’ ಚಿತ್ರ ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರವೇಶಿಸಿರುವ ಖುಷಿಯನ್ನು ಈ ಸಂದರ್ಭದಲ್ಲಿ ಅವರು ಹಂಚಿಕೊಂಡಿದ್ದಾರೆ. ಭಾರತೀಯ ಪನೋರಮಾ ವಿಭಾಗದಲ್ಲಿ ಈ ಚಿತ್ರ ಆಯ್ಕೆಗೊಂಡಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada