ಹ್ಯಾಟ್ರಿಕ್ ಫಿಲ್ಮಂಫೇರ್ ಕಿರೀಟ ಧರಿಸಿದ ರಾಧಿಕಾಗೆ ಕಂಗ್ರಾಟ್ಸ್
ಕಿರುತೆರೆಯಿಂದ ಹಿರಿತೆರೆಗೆ 2008ರಲ್ಲಿ ಜಿಗಿದ ರಾಧಿಕಾ ಪಂಡಿತ್, ಸತತವಾಗಿ ಮೂರು ಬಾರಿ ಫಿಲ್ಮಂಫೇರ್ ಪ್ರಶಸ್ತಿ ಪಡೆಯುವ ಮೂಲಕ ದಾಖಲೆ ಮೆರೆದಿದ್ದಾರೆ. ಮೊಗ್ಗಿನ ಮನಸು, ಲವ್ ಗುರು ಹಾಗೂ ಕೃಷ್ಣನ್ ಲವ್ ಸ್ಟೋರಿ ಚಿತ್ರದಲ್ಲಿ ನೀಡಿದ ಮನೋಜ್ಞ ಅಭಿನಯ ಜನ ಮೆಚ್ಚುಗೆ ಗಳಿಸಿದೆ. ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ರಾಧಿಕಾ ಅವರ ಪ್ರತಿಭೆಗೆ ತಕ್ಕ ಪುರಸ್ಕಾರ ಲಭಿಸಿರುವುದು ಅವರ ಅಭಿಮಾನಿಗಳ ಹರ್ಷ ಹೆಚ್ಚಿಸಿದೆ.
ಹೈದರಾಬಾದಿನ ಇಂಟರ್ ನ್ಯಾಷನಲ್ ಕನ್ವೇಷನ್ ಸೆಂಟರ್ ನಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಫಿಲ್ಮಂಫೇರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಮಸ್ಸು ಚಿತ್ರದ ಅಭಿನಯಕ್ಕಾಗಿ ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ ಶಿವರಾಜ್ ಕುಮಾರ್ ಗೆ ಇದು ನಾಲ್ಕನೇ ಪ್ರಶಸ್ತಿ. ಈ ಮುಂಚೆ ಓಂ, ನಮ್ಮೂರ ಮಂದಾರ ಹೂವೆ, ಏಕೆ 47 ಚಿತ್ರದ ನಟನೆಗೆ ಫಿಲ್ಮಂಫೇರ್ ಪಡೆದಿದ್ದರು.ಅನಾರೋಗ್ಯದ ಕಾರಣ, ಶಿವರಾಜ್ ಅವರು ಸಮಾರಂಭಕ್ಕೆ ಹಾಜರಿರಲಿಲ್ಲ.
ಪ್ರಶಸ್ತಿ ಪೂರ್ಣ ಪಟ್ಟಿ:
ಅತ್ಯುತ್ತಮ ಚಿತ್ರ: ಸೂರಿ ನಿರ್ದೇಶನದ ಜಾಕಿ
ಅತ್ಯುತ್ತಮ ನಿರ್ದೇಶಕ: ಗಿರೀಶ್ ಕಾಸರವಳ್ಳಿ(ಚಿತ್ರ:ಕನಸೆಂಬೋ ಕುದುರೆಯನ್ನೇರಿ)
ಅತ್ಯುತ್ತಮ ಗೀತ ಸಾಹಿತಿ: ಕವಿರಾಜ್(ಗರನೆ ಗರನೆ..ಚಿತ್ರ: ಆಪ್ತರಕ್ಷಕ)
ಅತ್ಯುತ್ತಮ ಗಾಯಕ: ಎಸ್ ಪಿ ಬಾಲಸುಬ್ರಮಣ್ಯಂ(ಗರನೆ ಗರನೆ..ಚಿತ್ರ: ಆಪ್ತರಕ್ಷಕ)
ಅತ್ಯುತ್ತಮ ಪೋಷಕ ನಟ: ಅವಿನಾಶ್(ಚಿತ್ರ: ಆಪ್ತರಕ್ಷಕ)
ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ(ಜಾಕಿ)
ಅತ್ಯುತ್ತಮ ಪೋಷಕ ನಟಿ: ಉಮಾಶ್ರೀ(ಚಿತ್ರ:ಕೃಷ್ಣನ್ ಲವ್ ಸ್ಟೋರಿ)
ಅತ್ಯುತ್ತಮ ನಟ: ಶಿವರಾಜ್ ಕುಮಾರ್(ಚಿತ್ರ: ತಮಸ್ಸು)
ಅತ್ಯುತ್ತಮ ನಟಿ: ರಾಧಿಕಾ ಪಂಡಿತ್ (ಚಿತ್ರ: ಕೃಷ್ಣನ್ ಲವ್ ಸ್ಟೋರಿ)

More from Filmibeat
English summary
Radhika Pandit shined at the 58th Film Fare awards Function held at the International ConventiRadhika Pandit shined at the 58th Film Fare awards Function held at the International Convention Centre on Saturday July 2. Radhika emerged as the Best Actress for movies Krishnan Love Story. She has won threeconsecutive Filmfare awards. Shivaraj Kumar bagged his 4th Filmfare award.on Centre on Saturday July 2. Radhika emerged as the Best Actress for movies Krishnan Love Story. She has won threeconsecutive Filmfare awards.

Click it and Unblock the Notifications