ಸಾರಥಿ ಚಿತ್ರದ ರೆಸ್ಪಾನ್ಸ್‌ಗೆ ಜೈಲಿನಲ್ಲಿ ಕಣ್ಣೀರಾದ ದರ್ಶನ್

By Rajendra

ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ಕಣ್ಣಲ್ಲಿ ಕಣ್ಣೀರು ಕಟ್ಟೆಯೊಡೆದಿದೆ! ಆದರೆ ಇದು ದುಃಖದಿಂದ ಒತ್ತರಿಸಿ ಬಂದ ಕಣ್ಣೀರಲ್ಲ. ರಾಜ್ಯದಾದ್ಯಂತ 'ಸಾರಥಿ' ಚಿತ್ರಕ್ಕೆ ವ್ಯಕ್ತವಾಗಿರುವ ಅದ್ಭುತ ಪ್ರತಿಕ್ರಿಯೆಗೆ ಪ್ರತಿಯಾಗಿ ಕಣ್ಣಿನಿಂದ ಧುಮ್ಮಿಕ್ಕಿದ ಆನಂದಬಾಷ್ಪಗಳಿವು.

ದರ್ಶನ್ ಜೈಲು ಸೇರಿದ ಮೇಲೆ ತೆರೆಕಂಡ 'ಸಾರಥಿ' ಚಿತ್ರಕ್ಕೆ ಅವರ ಅಪಾರ ಅಭಿಮಾನಿ ಬಳಗದಿಂದ ತಲೆದೂಗಿದೆ. ಮಾಧ್ಯಮಗಳಿಂದಲೂ ಉತ್ತಮ ವಿಮರ್ಶೆ ವ್ಯಕ್ತವಾಗಿದ್ದು, ಇದನ್ನು ಜೈಲಿನಲ್ಲೇ ಕೂತು ತಿಳಿದುಕೊಂಡಿರುವ ದರ್ಶನ್ ತನ್ನ ಅಭಿಮಾನಿಗಳ ಅಕ್ಕರೆಗೆ ಮಂಜಿನಂತೆ ಕರಗಿ ನೀರಾಗಿದ್ದಾರೆ.

ದರ್ಶನ್ ಸಹೋದರ ದಿನಕರ್ ಹಾಗೂ ನಿರ್ಮಾಪಕ ಕೆ ವಿ ಸತ್ಯ ಪ್ರಕಾಶ್ ಜೈಲಿನಲ್ಲಿ ದರ್ಶನ್‌ರನ್ನು ಭೇಟಿಯಾಗಿ ರಾಜ್ಯದಾದ್ಯಂತ 'ಸಾರಥಿ' ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಯನ್ನು ತಿಳಿಸಿದ್ದಾರೆ. ಇದನ್ನು ಕೇಳಿದ ದರ್ಶನ್ ಕಣ್ಣುಗಳು ಒದ್ದೆಮುದ್ದೆಯಾಗಿವೆ.

ದೇವರು ನನಗೆ ಶೀಘ್ರ ಬಿಡುಗಡೆ ಭಾಗ್ಯ ಕಲ್ಪಿಸಿದರೆ ತಮ್ಮ ನೆಚ್ಚಿನ ಅಭಿಮಾನಿಗಳನ್ನು ಜಿಲ್ಲೆಜಿಲ್ಲೆಯಲ್ಲೂ ಭೇಟಿಯಾಗುವ ತಮ್ಮ ಮನದಾಳದ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾಗಿ ದಿನಕರ್ ತೂಗುದೀಪ ತಿಳಿಸಿದ್ದಾರೆ. ಏತನ್ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್‌ರನ್ನು ಜೈಲಿನಲ್ಲಿ ಭೇಟಿಯಾಗಲು ಸಾಧ್ಯವಾಗಿಲ್ಲ. ಸಾರಥಿ ಚಿತ್ರ ವಿಮರ್ಶೆ ಓದಲು ಮರೆಯದಿರಿ! (ಏಜೆನ್ಸೀಸ್)

More from Filmibeat

English summary
Kannada actor Darshan shed happy tears in Parappana Agrahara jail after he hearing response to his newly released film Sarathi (Sarathy) directed by his brother Dinakar Doogudeepa and produced by K.V.Sathya Prakash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X