For Quick Alerts
  ALLOW NOTIFICATIONS  
  For Daily Alerts

  ಹುಟ್ಟೂರು ತ್ಯಾಮಗೊಂಡ್ಲುನಲ್ಲಿ ಕರಿಬಸವಯ್ಯ ಅಂತ್ಯಕ್ರಿಯೆ

  By Rajendra
  |

  Karibasavaiah last rituals
  ಕನ್ನಡ ಚಿತ್ರಗಳ ಜನಪ್ರಿಯ ಹಾಸ್ಯ ನಟ, ರಂಗಭೂಮಿ ಚೇತನ ಕರಿಬಸವಯ್ಯ ಅವರು ಅಂತ್ಯಕ್ರಿಯೆ ಶನಿವಾರ (ಫೆ.4)ರಂದು ಅವರ ಹುಟ್ಟೂರಾದ ತ್ಯಾಮಗೊಂಡ್ಲುವಿನಲ್ಲಿ ಮಧ್ಯಾಹ್ನ ನೆರವೇರಲಿದೆ.

  ಕರಿಬಸವಯ್ಯ ಅವರ ಪಾರ್ಥೀವ ಶರೀರವನ್ನು ಶನಿವಾರ ಅವರ ಹುಟ್ಟೂರಿಗೆ ಕೊಂಡೊಯ್ಯಲಾಗುತ್ತದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಫೆ.3) ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದೆ.

  ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ ಜನಿಸಿದ್ದರು. ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ್ದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

  ನಟರಾದ ಅಂಬರೀಷ್, ಜಗ್ಗೇಶ್, ರಮೇಶ್ ಅರವಿಂದ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಎಸ್ ನಾರಾಯಣ್, ತಾರಾ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Kannada films comedy actor Karibasavaiah last rituals perform at his birthplace Thyamagondlu on February 4th. He passes away on February 3rd at Pristine Hospital in Bangalore. He was met with an accident and broke the bones of his back on Jan 31st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X