ಮಂಗಳೂರಲ್ಲಿ ಶಿವರಾಜ್ ಕುಮಾರ್ ಮೇನಿಯಾ

By * ಚಿದಂಬರ ಬೈಕಂಪಾಡಿ

ಕನ್ನಡದ ಚಿತ್ರ ನಟ ಕಲ್ಯಾಣ್ ಜುವೆಲ್ಲರ್ಸ್ ಬ್ರ್ಯಾಂಡ್ ಅಂಬಾಸೆಡರ್ ಶಿವರಾಜ್ ಕುಮಾರ್ ಕಡಲತಡಿಯ ತಮ್ಮ ಅಭಿಮಾನಿಗಳನ್ನು ಅಭಿನಂದಿಸಲು ಮೈಕ್ ಹಿಡಿದು ಹಾಡು ಹಾಡಿದರು. ರವಿವಾರ್ ಕಲ್ಯಾಣ್ ಜುವೆಲ್ಲರ್ಸ್ ಹೊಸ ಮಳಿಗೆ ಉದ್ಘಾಟನೆಗೆ ಆಗಮಿಸಿದ್ದ ಶಿವರಾಜ್ ಕುಮಾರ್ ಅವರನ್ನು ಕಾಣಲು ಬಳ್ಳಾಲ್ ಬಾಗ್ ಎಂ.ಜಿ.ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ವಾಹನ ಸಂಚಾರ ಸ್ತಗಿತಗೊಂಡು ಕೆಲ ಕಾಲ ಆತಂಕ ಉಂಟಾಯಿತು.

ಭಾರೀ ಗಾತ್ರದ ಕೆಮರಾ ಕ್ರೇನ್ ಅಳವಡಿಸಿದ್ದ ಕಾರಣ ಜನರು ಚಿತ್ರದ ಶೂಟಿಂಗ್ ಇರಬೇಕೆಂದುಕೊಂಡಿದ್ದರು. ನಟ ಶಿವರಾಜ್ ಕುಮಾರ್ ಆಗಮಿಸಿದಾಗ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತು. ಈ ಸಂದರ್ಭದಲ್ಲಿ ಶಿವಣ್ಣ ಒಂದೆರಡು ಹಾಡುಗಳನ್ನು ಹಾಡಿ ರಂಜಿಸಿದರು.

ಉದ್ಘಾಟನೆ ಮುಗಿಸಿ ಎತ್ತರದ ವೇದಿಕೆ ಏರಿದ ಶಿವರಾಜ್ ಕುಮಾರ್ ಅಭಿಮಾನಿಗಳನ್ನು ಅಭಿನಂದಿಸಲು ಕೋಲುಮಂಡೆ ಜಂಗಮ ದೇವರು', ಮೈಸೂರ ಮಲ್ಲಿಗೆ ಯವ್ವನ..', ಊರಿಂದ ಓಡಿ ಬಂದ ಮೈಲಾರಿ...' ಹಾಡುಗಳನ್ನು ಹಾಡಿ ರಂಜಿಸಿದರು.ಉರಿ ಬಿಸಿಲಲ್ಲೂ ಕೆಲ ಹೊತ್ತು ಮಂಗಳೂರಲ್ಲಿ ಶಿವರಾಜ್ ಮೇನಿಯಾ.

More from Filmibeat

English summary
Hat Trick Hero Shivarajkumar visits Mangalore on Sunday October 2 to inaugurate a jewellery showroom. He was thronged and greeted by his fans who turned up in large number to get a glimpse of their hero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X