twitter
    For Quick Alerts
    ALLOW NOTIFICATIONS  
    For Daily Alerts

    ಯಶಸ್ಸಿನ ಸಾಗರದಲ್ಲಿ ಪಲಾಯನವಾದ ಪ್ರತಿಭೆ

    By ಬರಹ:ಮಹೇಶ್ ಮಲ್ನಾಡ್
    |

    "ನನ್ನಪ್ಪ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಒಳ್ಳೆ ಹೆಸರು ಮಾಡಿದ್ದರೂ, ನನಗೆ ಚಿಕ್ಕಂದಿನಿಂದಲೂ ತೆಲುಗು ಚಿತ್ರರಂಗದ ಮೇಲೆ ಏನೋ ಒಲವು. ಮುಂಗಾರು ಮಳೆ ಬಿಟ್ಟರೆ ನಾನು ಯಾವುದೇ ಕನ್ನಡ ಚಿತ್ರಗಳನ್ನು ಈ ಹದಿನೇಳು ವರ್ಷಗಳಲ್ಲಿ ನೋಡಿಲ್ಲ. ನನಗೆ ಕ್ರೇಜ್ ಹುಟ್ಟಿ ಹಾಕಿದ್ದು ತೆಲುಗು ಸಿನಿಮಾಗಳು. ಅದು ಬಿಟ್ಟರೆ alternatives ಆಗಿ ಹಿಂದಿ, ಇಂಗ್ಲೀಷ್ ಸಿನಿಮಾಗಳು ಇದ್ದೇ ಇರುತ್ತಿದ್ದವು...."

    ಹೀಗೆ ಪುಂಖಾನುಪುಂಖವಾಗಿ ಹೇಳುತ್ತಾ ಹೋಗುತ್ತಾರೆ ಭರತ್ ಅಲಿಯಾಸ್ ಯಶೋ ಸಾಗರ್, ಈ ಯುವ ನಾಯಕ ನಟನ ತಂದೆ ಬಿ.ಸಿ. ಸೋಮು ಕರ್ನಾಟಕದವರು, ತಾಯಿಯ ಮೂಲ ನೆಲೆ ಆಂಧ್ರದ ಚಿತ್ತೂರು. ಮಾತೃಪೇಮವೋ ಏನೋ ಯಶೋ ಸಾಗರ್ ಅವರ ಚಿತ್ರರಂಗ ಪ್ರವೇಶ ಆಗಿದ್ದು ತೆಲುಗು ಚಿತ್ರದ ಮೂಲಕ. ಶತ ದಿನಗಳ ಹೊಸ್ತಿಲಲ್ಲಿರುವ ಆ ಚಿತ್ರದ ಮೂಲಕ ಯಶಸ್ಸನ್ನು ಗಳಿಸಿದೆ ಕೂಡಾ. ಅದನ್ನು ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡಕ್ಕೆ ಭಟ್ಟಿ ಇಳಿಸಲು ಎಲ್ಲಾ ತಯಾರಿ ನಡೆಸಿಯೂ ಆಗಿದೆ. ಗಣೇಶ್ ಅವರ ರಿಮೇಕ್ ಚಿತ್ರಗಳ ಬಗೆಗಿನ ನಿಷ್ಠೆ ಅಷ್ಟರ ಮಟ್ಟಿಗೆ ಸಾರ್ಥಕತೆ ಪಡೆದಿದೆ ಎನ್ನಬಹುದು.

    ಹೌದು ನೀವು ಈಗಾಗಲೆ ಊಹಿಸಿದಂತೆ ಆ ಚಿತ್ರ ಉಲ್ಲಾಸಂಗಾ ಉತ್ಸಾಹಂಗ' ಕನ್ನಡಲ್ಲಿ ಉಲ್ಲಾಸದ ಹೂಮಳೆ ಎಂಬ ಹೆಸರಿನಲ್ಲಿ ಗಣೇಶ್ ಕನ್ನಡಗರನ್ನು ರಂಜಿಸಲಿದ್ದಾರೆ ಎಂದು ಈಗಾಗಲೇ ನಮ್ಮಲ್ಲಿ ವರದಿ ಮಾಡಿ ಆಗಿದೆ. ಗಣೇಶ್ ವಿಷ್ಯ ಹಾಗಿರಲಿ ಬಿಡಿ. ಯಶೋ ಸಾಗರನ ಸಾಗರದಷ್ಟೇ ವಿಶಾಲವಾದ ವಿಚಾರಧಾರೆಯತ್ತ ಗಮನ ಹರಿಸೋಣ.

    "ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಆಗಿದೆ. ಅದು ಅಂತಿಮ. ನಾನು ಕನ್ನಡ ಅಥವಾ ತಮಿಳು ಚಿತ್ರರಂಗದತ್ತ ಮುಖ ಮಾಡುವುದು ಸಾಧ್ಯವಿಲ್ಲ." ತೆಲುಗು ಚಿತ್ರರಂಗಕ್ಕೆ ನನ್ನ ಸೇವೆ ಮೀಸಲು ಎಂಬಂತೆ ಕನ್ನಡ ಧಾಟಿಯ ತೆಲುಗು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಸಾಗರ್ ಮಾತುಗಳನ್ನು ಕೇಳಿ, ಕನ್ನಡದಿಂದ ಪಲಾಯನವಾದ ಪ್ರತಿಭೆ ಅನ್ನುವುದಾ ಅಥವಾ ನಿಷ್ಠೆ ಇರದ ಹುಂಬ ಎನ್ನುವುದಾ ಅತನನ್ನು ಹೆತ್ತವರೇ ಹೇಳಬೇಕು.

    ನಾನು ಬೆಂಗಳೂರಿಗ ನಿಜ. ಸುಮಾರು 17 ವರ್ಷಗಳಿಂದ ಚಿತ್ರರಂಗವನ್ನು ಹತ್ತಿರದಿಂದ ನೋಡಿದ್ದೇನೆ. ನನ್ನ ತಂದೆ ಸುಮಾರು 20-25 ಚಿತ್ರಗಳನ್ನು ನಿರ್ಮಿಸಿದ್ದಾರೆ. ನನ್ನಮ್ಮನ ಇಚ್ಛೆ ನಾನು ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಬರಬೇಕು ಎಂಬುದಾಗಿತ್ತು. ಅದರಂತೆ ಆಯಿತು. ಹೈದರಾಬಾದ್ ನನ್ನ ಮೆಚ್ಚಿನ ತಾಣಗಳಲ್ಲಿ ಒಂದು. ಇಲ್ಲಿನ ಸಿನಿಮಾ ಚಟುವಟಿಕೆಗಳ ಬಗ್ಗೆ ಆಗಾಗ ಗಮನಹರಿಸುತ್ತಿದೆ. ಆಗಾಗಿ ನನಗೆ ಯಾವುದೂ ಹೊಸದೇನಿಸಿಲ್ಲ.

    ಈ ಚಿತ್ರಕ್ಕೆ ಡಬ್ಬಿಂಗ್ ಮಾಡಲು ನನಗೆ ಕಷ್ಟವೇನು ಅನಿಸಲಿಲ್ಲ. ನಾನು ಉತ್ತಮವಾಗಿ ತೆಲುಗು ಮಾತನಾಡಬಲ್ಲೆ. ಉಲ್ಲಾಸಂಗಾ .. ..ಚಿತ್ರದಲ್ಲಿ ಸ್ನೇಹಾ ಉಲ್ಲಾಳ್(ಮತೋರ್ವ ಕನ್ನಡಿತಿ) ಹಾಗು ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಅವರೊಡನೆ ಉತ್ತಮವಾದ ಕಾಲ ಕಳೆದೆ ಎನ್ನುವ ಸಾಗರ್ ಗೆ ಕನ್ನಡ/ತೆಲುಗು ನಟಿ ಸೌಂದರ್ಯ ಅಂದರೆ ಇಷ್ಟವಂತೆ. ಮುಂಜಾವಿನಲ್ಲಿ ವಾಕ್ ಮಾಡುವುದು, ಗಾಲ್ಫ್ ಆಡುವುದು ಇವರ ನೆಚ್ಚಿನ ಹವ್ಯಾಸ. ತೆಲುಗಿನಲ್ಲಿ ಗೋದಾವರಿ, ಹ್ಯಾಪಿ ಡೇಸ್ ನಂತಹ ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ಶೇಖರ್ ಕಮೂಲ ಅವರ ಮುಂದಿನ ಚಿತ್ರಕ್ಕೆ ಸಾಗರ್ ಆಯ್ಕೆಯಾಗಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.

    ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಭರತ್ ಎಂಬ ಮೂಲ ನಾಮವನ್ನು ಬದಲಿಸಿ ಯಶೋ ಸಾಗರ್ ಎಂದು ಬದಲಿಸಿ ಕೊಂಡರಂತೆ. ತಮ್ಮ ಹೆಸರಿನ ಅರ್ಥದ ವ್ಯಾಖ್ಯಾನ ಕೂಡ ಕೊಡುತ್ತಾ ಯಶೋ ಸಾಗರ ಎಂದರೆ ಸಾಗರದಂತೆ ಯಶಸ್ಸನ್ನು ಪಡೆವವನು ಎಂದರು. ಹ್ಞು. .ಸಾಗರದಂತೆ ವಿಶಾಲವಾದ ಯಶಸ್ಸು ಪಡೆಯುತ್ತಾರೋ, ಅಥವಾ ಯಶಸ್ಸಿನ ಸಾಗರದಲ್ಲಿ ಮುಳುಗುತ್ತಾರೋ ಕಾಲವೇ ನಿರ್ಧರಿಸುತ್ತದೆ. ಸಾಗರದಂತೆ ವಿಶಾಲ ಮನಸ್ಸುಳ್ಳ ನಮ್ಮ ಕನ್ನಡಿಗರು ಈ ಯುವ ನಾಯಕ ನಟನ ಬಗ್ಗೆ ಯಾವ ನಿಲುವು ತಾಳುತ್ತಾರೋ ಕಾದು ನೋಡೋಣ.

    Friday, April 19, 2024, 21:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X