ಪುಟ್ನಂಜಿ ಮೀನಾ ಈಗ ಗರ್ಭವತಿ
ಚಿತ್ರನಟಿ ಮೀನಾ ದಾಂಪತ್ಯಕ್ಕೆ ಅಡಿಯಿಟ್ಟು ಒಂದು ವರ್ಷವಾಗುತ್ತಿದೆ. ಜುಲೈ 2009ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದ ವಿದ್ಯಾಸಾಗರ್ ಅವರ ಕೈಹಿಡಿದ್ದರು ಮೀನಾ. ಈಗ ಅವರು ಗರ್ಭಿಣಿ ಅಂತೆ. ಆಶ್ಚರ್ಯಕರವಾದ ಸಂಗತಿ ಎಂದರೆ ತಾನು ಗರ್ಭಿಣಿ ಎಂಬ ವಿಚಾರವನ್ನು ಮೀನಾ ಗುಟ್ಟಾಗಿಟ್ಟಿದ್ದಾರೆ.
ಸದ್ಯಕ್ಕೆ 'ಹೆಂಡ್ತೀರ್ ದರ್ಬಾರ್' ಚಿತ್ರವನ್ನು ಹೊರತುಪಡಿಸಿದರೆ ಮೀನಾ ಇನ್ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಆಕೆ ಗರ್ಭಿಣಿಯಾಗಿರುವ ಕಾರಣ ಅವಕಾಶಗಳು ಸದ್ಯಕ್ಕೆ ಹುಡುಕಿಕೊಂಡು ಬರುತ್ತಿಲ್ಲ. ಮದುವೆಯಾದ ಬಳಿಕ ಮೀನಾ ಒಪ್ಪಿಕೊಂಡ ಮೊದಲ ಚಿತ್ರ 'ಹೆಂಡ್ತೀರ್ ದರ್ಬಾರ್'.
ಕದ್ದು ಮುಚ್ಚಿ ಬಸುರಾದರೆ ಸಮಾಜಕ್ಕೆ ಹೆದರಬೇಕು. ಆದರೆ ಮೀನಾ ಯಾಕೆ ತಮ್ಮ ಬಸಿರನ್ನು ಬಚ್ಚಿಡುತ್ತಿದ್ದಾರೋ ಗೊತ್ತಿಲ್ಲ ಎನ್ನುತ್ತಿದ್ದಾರೆ ಆಕೆಯ ಅಭಿಮಾನಿಗಳು. ಮೈ ಆಟೋಗ್ರಾಫ್, ಮಹಾಸಾಧ್ವಿ ಮಲ್ಲಮ್ಮ, ಗೌಡ್ರು, ಸ್ವಾತಿ ಮುತ್ತು, ಸಿಂಹಾದ್ರಿಯ ಸಿಂಹ, ಶ್ರೀಮಂಜುನಾಥ, ಪುಟ್ನಂಜ ಮುಂತಾದ ಚಿತ್ರಗಳಲ್ಲಿ ಮೀನಾ ಅಭಿನಯಿಸಿದ್ದು ಗೊತ್ತೆ ಇದೆ.


Click it and Unblock the Notifications











