»   » ಕೊಡಗಿನ ಬೆಡಗಿ ಪ್ರೇಮಾ ಶಿಶಿರದಲ್ಲಿ ಪ್ರತ್ಯಕ್ಷ

ಕೊಡಗಿನ ಬೆಡಗಿ ಪ್ರೇಮಾ ಶಿಶಿರದಲ್ಲಿ ಪ್ರತ್ಯಕ್ಷ

Subscribe to Filmibeat Kannada
actress prema
ನಟಿ ಪ್ರೇಮಾ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಂತರ ಬಣ್ಣದ ಲೋಕದಿಂದ ಕೊಂಚ ಕಾಲ ದೂರ ಸರಿದಿದ್ದರು. ಪ್ರೇಕ್ಷಕರು ಪ್ರೇಮಾರನ್ನು ಇನ್ನೇನು ಮರೆತೇ ಬಿಟ್ಟರು ಎಂದುಕೊಳ್ಳುವಾಗ ಮತ್ತೆ ಬಣ್ಣ ಬಳಿದುಕೊಳ್ಳಲು ಅಣಿಯಾಗಿದ್ದಾರೆ.

ಸವ್ಯಸಾಚಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ ಪ್ರೇಮಾ ಅನೇಕ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಸಾಫ್ಟ್ ವೇರ್ ಉದ್ಯೋಗಿ ಜೀವನ್ ಅವರನ್ನು ಬಾಳ ಸಂಗಾತಿಯಾಗಿ ವರಿಸಿದ ನಂತರ ಅವರ ಸುದ್ದಿಯಿರಲಿಲ್ಲ. ಈ ಮಧ್ಯೆ ಕನ್ನಡ ಚಿತ್ರರಂಗಕ್ಕೆ ಆಗಮಿಸುತ್ತ್ತಿರುವ ಹಿಂಡು ಹಿಂಡು ಹೊಸಮುಖಗಳ ನಡುವೆ ಪ್ರೇಮಾ ಕಾಣೆಯಾಗಿದ್ದರು.

ಮಂಜು ಸ್ವರಾಜ್ ನಿರ್ದೇಶಿಸುತ್ತಿರುವ 'ಶಿಶಿರ'ಚಿತ್ರದಲ್ಲಿ ಪ್ರೇಮಾ ನಟಿಸುತ್ತಿದ್ದಾರೆ. ಪ್ರೇಮಾ ಅವರ ಹುಟ್ಟೂರು ಸೋಮವಾರ ಪೇಟೆಯಲ್ಲೇ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರದಲ್ಲಿ ನಟಿಸಲು ಪ್ರೇಮಾ ಮೊದಲು ನಿರಾಕರಿಸಿದ್ದರಂತೆ. ಕಥೆ ಕೇಳಿದ ನಂತರ ಅವರಿಗೆ ಬೇಡ ಎನ್ನಲು ಮನಸ್ಸೇ ಬರಲಿಲ್ಲವಂತೆ! ಹಾಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ.

ಕೊಡಗಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಂದುವರಿದಿದೆ. ಒಟ್ಟು ಒಂಬತ್ತು ಹಾಡುಗಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕೇಶ್ ಸಂಗೀತ ನಿರ್ದೇಶಿಸುತ್ತಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ, ಹೊಸಮನೆ ಮೂರ್ತಿ ಕಲೆ ಈ ಚಿತ್ರಕ್ಕ್ಕಿದೆ. ಯಶ್ ಮತ್ತು ಮೇಘನಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada