ಕ್ರೇಜಿಲೋಕದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಗಲಭೆ

ಚಿತ್ರದ ನಿರ್ದೇಶಕಿ ಕವಿತಾ ಲಂಕೇಶ್ ಅವರೂ ಇದು ಐಟಂ ಹಾಡಲ್ಲ ಎಂದು ಸ್ಪಷ್ಟಪಡಿಸಿದ್ದರು. ಬಳಿಕ ಎಲ್ಲವೂ ತಣ್ಣಗಾಗಿತ್ತು. ಈಗ 'ಕ್ರೇಜಿಲೋಕ' ಚಿತ್ರ ಆಡಿಯೋ ಮಾರುಕಟ್ಟೆಗೆ ಬಂದಿದೆ. "ಗಲಭೆ ಗಲಭೆ ನಾನು ಹೋದಲ್ಲೆಲ್ಲಾ ಗಲಭೆ..." ಹಾಡು ಎಲ್ಲೆಲ್ಲೂ ಕೇಳಿಸುತ್ತಿದೆ.
ಗೀತ ಸಾಹಿತಿ ಕವಿರಾಜ್ ಬರೆದಿರುವ ಈ ಹಾಡಿನ ಬಗ್ಗೆ ಚಿತ್ರ ಬಿಡುಗಡೆಯಾಗುವವರೆಗೂ ಯಾವುದೇ ಪ್ರಚಾರ ನೀಡಬಾರದು. ಹಾಗಂತ ರಮ್ಯಾ ಕಟ್ಟಪ್ಪಣೆ ಮಾಡಿದ್ದಾರಂತೆ. ಹಾಗಾಗಿ 'ಗಲಭೆ' ಸದ್ಯಕ್ಕೆ ತಣ್ಣಗಾಗಿದೆ ಎನ್ನುತ್ತವೆ ಮೂಲಗಳು. ಗಾಯಕಿ ಚಿತ್ರಾ ಹಾಡಿರುವ ಈ ಹಾಡಿನ ಚಿತ್ರೀಕರಣ ನಡೆದದ್ದು ಮೈಸೂರು ಲ್ಯಾಂಪ್ಸ್ ಪ್ರದೇಶದಲ್ಲಿ. ರಮ್ಯಾ ಜೊತೆಗೆ ಹಲವಾರು ಸಲ ಕಲಾವಿದರು ಈ ಹಾಟ್ ಹಾಡಿನಲ್ಲಿ ಕುಣಿದಿದ್ದಾರೆ. (ಏಜೆನ್ಸೀಸ್)
More from Filmibeat
English summary
Recently Crazy Loka audio released. One of the song in the album Galabe Galabe Naanu Hodalella Galabe....song featuring Ramya has been shot at Mysore Lamps with co dancers. The publicity for this song should be only at the release time is what Kavitha Lankesh promised Ramya.


Click it and Unblock the Notifications











