ಪ್ರೀತಿಯ ಹಂಗಾಮದಲ್ಲಿ ಶುಭಾ ತುಂಟಾಟ
ಹದಿಹರೆಯದ ಹುಚ್ಚು ವಯಸ್ಸದು. ಪ್ರೀತಿಯ ಬಲೆಯಲ್ಲಿ ಬಿದ್ದ ಪ್ರೇಮಿಗಳು ಬಾನಲ್ಲಿ ಹಾರುವ ಹಕ್ಕಿಗಳ ಹಾಗೆ. ಆಟವಾಡುತ್ತಾರೆ, ಜಗಳವಾಡುತ್ತಾರೆ, ರೇಗಿಸುತ್ತಾರೆ ಇತ್ಯಾದಿ. ಪ್ರೀತಿಯ ಹಂಗಾಮದಲ್ಲೂ ಇದೇರೀತಿ. ಯುವಜೋಡಿ ವಿವೇಕ್‌ರಾಜ್ ಹಾಗೂ ಶುಭಾಪುಂಜಾ ಪ್ರೇಮಿಗಳಾದರೂ ಅಲ್ಲದೆ ರೀತಿ ವರ್ತಿಸುತ್ತಾರೆ. ರಸ್ತೆಯಲ್ಲಿ ಕಿತ್ತಾಡಿಕೊಂಡು ಪೊಲೀಸ್‌ಠಾಣೆಯ ಮೆಟ್ಟಿಲನ್ನು ಏರುತ್ತಾರೆ. ಈ ಯುವ ಪ್ರೇಮಿಗಳನ್ನು ಪೊಲೀಸ್‌ಅಧಿಕಾರಿ ಊರ್ವಶಿ ವಿಚಾರಿಸಿ ಬುದ್ದಿ ಹೇಳುತ್ತಾರೆ. ದಕ್ಷಿಣಭಾರತದ ಖ್ಯಾತತಾರೆ ಊರ್ವಶಿ ಹಾಗೂ ವಿವೇಕ್‌ರಾಜ್, ಶುಭಾಪುಂಜಾ ಅಭಿನಯಿಸಿದ ಈ ಸನ್ನಿವೇಶ ನಗರದ ಟೇಕ್ನೊಮಾರ್ಕ್ ಆವರಣದಲ್ಲಿ ನಿರ್ಮಿಸಿರುವ ಪೊಲೀಸ್‌ಠಾಣೆ ಸೆಟ್‌ನಲ್ಲಿ ಚಿತ್ರೀಕೃತವಾಯಿತು. ನಿವಾಸಿ ಆರ್ಟ್ ಲಾಂಛನದಲ್ಲಿ ಏಕನಾಥ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವಿವೇಕ್‌ರಾಜ್ ಚಿತ್ರದ ನಿರ್ದೇಶಕರೂ ಹೌದು. ಆರು ಹಾಡುಗಳಿರುವ ಈ ಚಿತ್ರಕ್ಕೆ ರಾಜ್‌ಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ವರ್ಮನ್ ಸಂಕಲನ, ಮದನ್‌ಹರಿಣಿ ನೃತ್ಯ, ಕವಿರಾಜ್ ಗೀತರಚನೆ, ಜಯಕುಮಾರ್ ನಿರ್ಮಾಣನಿರ್ವಹಣೆ, ಎಂ.ಎಸ್.ರಮೇಶ್ ಹಾಗೂ ಆರ್.ರಾಜಶೇಖರ್ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿವೇಕ್‌ರಾಜ್, ಶುಭಾಪುಂಜಾ, ಅವಿನಾಶ್, ಊರ್ವಶಿ, ನಂದ, ಪ್ರಕಾಶ್ ಮುಂತಾದವರಿದ್ದಾರೆ. (ದಟ್ಸ್ ಕನ್ನಡ ಸಿನಿವಾರ್ತೆ) ಕವಿರಾಜ್ ಸಾಹಿತ್ಯಕ್ಕೆ ಶುಭಾಪುಂಜಾ ನರ್ತನ


Click it and Unblock the Notifications











