ಇದು ನಾಕೊಂದ್ಲ ನಾಕು ಅಲ್ಲ ಐದು ಒಂದ್ಲ ಐದು ಕತೆ
ಒಂಥರಾ ವಿಭಿನ್ನ ಕತೆ ಇದು. ನಾಲ್ಕು ನಾಟಕಗಳನ್ನು ಒಂದೇ ಸಿನಿಮಾ ಮಾಡುವುದು ಹೇಗೆ ಎಂಬುದು ಚಿತ್ರದ ಕಥೆ.ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ನಿರ್ದೇಶಕನ ಪಾತ್ರವದು. ಚಿತ್ರದಹೆಸರು ಐದು ಒಂದ್ಲ ಐದು. ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ನಿರ್ದೇಶಕ ವಿ ಕೆ ಪ್ರಕಾಶ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಆಕ್ಷನ್, ಕಟ್ ಹೇಳುತ್ತಿದ್ದಾರೆ.
ಮಲಯಾಳಂ ನಟ ದಿಲೀಪ್ ಚಿತ್ರದಲ್ಲಿ ನಿರ್ದೇಶಕನಾಗಿ ಕಾಣಿಸಲಿದ್ದಾರೆ. ಚಿತ್ರದಲ್ಲಿ ಬರುವ ನಿರ್ದೇಶಕನಿಗೆ ಜನ ಉಚಿತ ಸಲಹೆಗಳನ್ನು ಕೊಡುತ್ತಿರುತ್ತಾರೆ. ಚಿತ್ರ ಭರ್ಜರಿಯಾಗಿ ಓಡಬೇಕಾದರೆ ಒಂದು ಐಟಂ ಸಾಂಗ್ ಇರಬೇಕು ಹಾಗೆ ಹೀಗೆ ಎಂದು ತಲೆಗೊಂದು ಹೇಳುತ್ತಿರುತ್ತಾರೆ. ಆದರೆ ಈ ಚಿತ್ರವನ್ನು ನಿರ್ಮಿಸಲು ಯಾವ ನಿರ್ಮಾಪಕನು ಮುಂದೆ ಬರುವುದಿಲ್ಲ. ಕಡೆಗೆ ನಿರ್ದೇಶಕನೇ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಹೊರುತ್ತಾನೆ.ಅದೇ ಐದು ಒಂದ್ಲ ಐದು.
ಈ ಚಿತ್ರದತಾರಾಬಳಗದಲ್ಲಿ ಪದ್ಮಪ್ರಿಯಾ, ಶ್ರುತಿ, ಹರೀಶ್ ರಾಜ್, ದೇವರಾಜ್, ಸಿ ಆರ್ ಸಿಂಹ, ನಿತ್ಯಾ ಮೆನನ್, ಅಜಿತ್ ಹಂಡೆ , ಪ್ರಕಾಶ್ ಅವರ ಸಹಾಯಕಿ ರಶ್ಮಿ ವೃಂದಾ ಮುಂತಾದವರಿದ್ದಾರೆ. ಕೆ ಯು ಮೋಹನನ್ ಸೇರಿದಂತೆ ಐದು ಮಂದಿ ಛಾಯಾಗ್ರಾಹಕರು. ವಿಜಯ ಪ್ರಕಾಶ್ ಸೇರಿದಂತೆ ಐದು ಮಂದಿ ಸಂಗೀತ ನಿರ್ದೇಶಕರು ಐದು ಒಂದ್ಲ ಐದು ಚಿತ್ರಕ್ಕಿದೆ. ಈ ಚಿತ್ರದ ಹೊಚ್ಚ ಹೊಸ ಟ್ರೈಲರ್ ನೋಡಿ.


Click it and Unblock the Notifications











