ಕೆಂಪೇಗೌಡನಿಗೆ ಸಿಕ್ಕಿದಳು ಫೇರ್ ಅಂಡ್ ಲವ್ಲಿ ಬೆಡಗಿ

By Rajendra

ಸುದೀಪ್ ನಿರ್ದೇಶಿಸಿ, ಅಭಿನಯಿಸುತ್ತಿರುವ 'ಕೆಂಪೇಗೌಡ' ಚಿತ್ರಕ್ಕೆ ನಾಯಕಿಯಾಗಿ ದೆಹಲಿ ಮೂಲದ ರೂಪದರ್ಶಿ ಅಂಚಲ್ ಸಬರ್ ‍ವಾಲ್ ಆಯ್ಕೆಯಾಗಿದ್ದಾರೆ. ಈಕೆ 'ಫೇರ್ ಅಂಡ್ ಲವ್ಲಿ', 'ಸೋನಿ' ಸೇರಿದಂತೆ ಅನೇಕ ಉತ್ಪನ್ನಗಳ ರಾಯಭಾರಿಯಾಗಿ ಜಾಹೀರಾತುಗಳಲ್ಲಿ ನಟಿಸಿದ್ದಾರೆ.

23ರ ಹರೆಯದ ಈ ಚೆಲುವೆ ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಷ್ ಪದವೀಧರೆ. ಹಿಂದಿಯ ಕೆಲವು ಧಾರಾವಾಹಿಗಳು ಸೇರಿದಂತೆ 'ಆಮ್ರಸ್' ಎಂಬ ಚಿತ್ರದಲ್ಲೂ ನಟಿಸಿದ್ದಾರೆ. ಪ್ರಾಣಿ ಪ್ರಿಯೆ, ಸಾಹಸ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಈಕೆ ಅಭಿನಯಿಸುತ್ತಿರುವ ಚೊಚ್ಚಲ ಕನ್ನಡ ಚಿತ್ರ 'ಕೆಂಪೇಗೌಡ'.

'ಕೆಂಪೇಗೌಡ' ಚಿತ್ರ ತಮಿಳಿನ 'ಸಿಂಗಂ' ಚಿತ್ರದ ರೀಮೇಕ್. ಚಿತ್ರೀಕರಣ ಈಗಾಗಲೆ ಆರಂಭವಾಗಿದೆ. ಖಳನಟನ ಪಾತ್ರಕ್ಕೆ ಮುಂಬೈನಿಂದ ನಟರೊಬ್ಬರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.ಈ ಚಿತ್ರಕ್ಕೆ ಕನ್ನಡದ ಹುಡುಗಿ ಸಿಗಲಿಲ್ಲವೆ? ಎಂದರೆ, ಸುದೀಪ್ ಎತ್ತರಕ್ಕೆ ಅವರ ಪಾತ್ರಕ್ಕೆ ಸರಿಹೊಂದುವ ನಟಿ ಸಿಗಲಿಲ್ಲ ಎಂಬುದು ನಿರ್ಮಾಪಕ ಶಂಕರೇಗೌಡ ಅವರು ಕೊಡುವ ಉತ್ತರ.

ಈಗಾಗಲೆ ಮೂರು ದಿನಗಳ ಚಿತ್ರೀಕರಣ ನಡೆದಿದೆ. ಅಂದುಕೊಂಡಂತೆ ಬರಲಿಲ್ಲ ಎಂಬ ಕಾರಣಕ್ಕೆ ಸೆ.3ರಿಂದ ಮತ್ತೆ ಚಿತ್ರೀಕರಿಸಲಾಗುತ್ತಿದೆ. ನಾಯಕ ಮತ್ತು ನಾಯಕಿ ಇರುವ ದೃಶ್ಯಗಳನ್ನು ಸೆ.8ರಿಂದ ಚಿತ್ರೀಕರಿಸಲಾಗುತ್ತದೆ. ಸೆ.8ರಂದು ಅಂಚಲ್ ಕೂಡ ಬೆಂಗಳೂರಿಗೆ ಆಗಮಿಸಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X