ಹೆಣ್ಣು ಮಗು ಸಂಭ್ರಮದಲ್ಲಿ ಸಿನಿಮಾ ತಾರೆ ಮೀನಾ

By Rajendra

ಸಿನಿಮಾ ತಾರೆ ಮೀನಾ ಈಗ ಹೆಣ್ಣು ಮಗುವೊಂದರ ತಾಯಿ. ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 1.1.11ರಂದು ಪ್ರಸವಿಸಬೇಕು ಎಂದು ಬಹಳಷ್ಟು ಗರ್ಭಿಣಿಯರು ಬಯಸಿದ್ದರು. ಈ ಬಯಕೆ ಮೀನಾ ಅವರಿಗೂ ಇತ್ತು ಎಂದು ಕಾಣುತ್ತದೆ. ಆದರೆ ಅವರು ಜನವರಿ 2 ರಂದು ಪ್ರಸವಿಸುವ ಮೂಲಕ ಜನವರಿ 1ರ ಸುವರ್ಣವಕಾಶ ಕೈತಪ್ಪಿದಂತಾಗಿದೆ.

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಜುಲೈ 2009ರಲ್ಲಿ ಬೆಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ವಿದ್ಯಾಸಾಗರ್ ಅವರ ಕೈಹಿಡಿದ್ದರು ಮೀನಾ. ಸದ್ಯಕ್ಕೆ ಮೀನಾ ಅವರು ಆಸ್ಪತ್ರೆಯಲ್ಲಿ ಜನನೋತ್ತರ ಆರೈಕೆ ಪಡೆಯುತ್ತಿದ್ದು ಶೀಘ್ರದಲ್ಲೇ ಮನೆಗೆ ವಾಪಸಾಗಲಿದ್ದಾರೆ.

ಮೀನಾ ಮತ್ತು ಅವರ ಪತಿ ವಿದ್ಯಾ ಸಾಗರ್ ಅವರಿಗೆ ದಟ್ಸ್ ಕನ್ನಡ ಬಳಗದ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು. ಅಂದಹಾಗೆ ಮೀನಾ ಅವರು ಕನ್ನಡದ ಮೈ ಆಟೋಗ್ರಾಫ್, ಮಹಾಸಾಧ್ವಿ ಮಲ್ಲಮ್ಮ, ಗೌಡ್ರು, ಸ್ವಾತಿ ಮುತ್ತು, ಸಿಂಹಾದ್ರಿಯ ಸಿಂಹ, ಶ್ರೀಮಂಜುನಾಥ, ಪುಟ್ನಂಜ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಹೆಂಡ್ತೀರ್ ದರ್ಬಾರ್' ಚಿತ್ರ ಮೀನಾ ಅಭಿನಯದ ಕೊನೆಯ ಕನ್ನಡ ಚಿತ್ರ. [ಮೀನಾ]

More from Filmibeat

English summary
Actress Meena gives birth to baby girl on Jan 2, 2011 at Apollo Hospital, Chennai. Both the mother and baby are quite healthy. Hendtheer Darbar is her last Kannada film. Thatskannada congratulates and wishes all of them happy life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X