ಐದು ವರ್ಷಗಳ ಬಳಿಕ ಮತ್ತೆ ಬಿಕಿನಿಗೆ ಬಿಪಾಶಾ ಬಸು ಮೊರೆ
ಬಾಲಿವುಡ್ ಬೆಡಗಿ ಬಿಪಾಶಾ ಬಸು ಸುದೀರ್ಘ ಸಮಯದ ಬಳಿಕ ಮತ್ತೆ ಬಿಕಿನಿಗೆ ಮೊರೆ ಹೋಗಿದ್ದಾರೆ. 2006ರಲ್ಲಿ ತೆರೆಕಂಡ 'ಧೂಮ್ 2' ಚಿತ್ರದಲ್ಲಿ ಬಿಪಾಶಾ ಬಿಕಿನಿಯಲ್ಲಿ ಮಿಂಚಿದ್ದರು. ಐದು ವರ್ಷಗಳ ಬಳಿಕ ಈಗ ಮತ್ತೊಮ್ಮೆ 'ಪ್ಲೇಯರ್ಸ್' ಚಿತ್ರದಲ್ಲಿ ಬಿಕಿನಿಯಲ್ಲಿ ದರ್ಶನಭಾಗ್ಯ ನೀಡಲಿದ್ದಾರೆ.
ಬಿಪಾಶಾಗೆ ಈಜುಕೊಳ ಹಾಗೂ ಈಜುಡುಗೆಗಳೆಂದರೆ ಎಲ್ಲಿಲ್ಲದ ಉತ್ಸಾಹ ಉಕ್ಕಿಬರುತ್ತದಂತೆ. ಈ ಬಾರಿ ರವಿ ಕೆ ಚಂದ್ರನ್ ಅವರ ಕ್ಯಾಮೆರಾ ಬಿಪಾಶಾರ ಬಿಕಿನಿ ಸನ್ನಿವೇಶಗಳನ್ನು ಎಷ್ಟರ ಮಟ್ಟಿಗೆ ಸೆರೆಹಿಡಿಯಲಿದೆ ಎಂಬ ಕುತೂಹಲ ಬಾಲಿವುಡ್‌ನಲ್ಲಿ ಮನೆಮಾಡಿದೆ.
'ಪ್ಲೇಯರ್' ಚಿತ್ರಕ್ಕಾಗಿ ಬಿಪಾಶಾ ಈಗಾಗಲೆ ತರಹೇವಾರಿ ಬಿಕಿನಿಗಳನ್ನು ಟ್ರೈ ಮಾಡಿದ್ದಾರಂತೆ. ಟೂಪೀಸ್‌ನಲ್ಲಿ ತಾವು ಅದ್ಭುತವಾಗಿ ಕಾಣಿಸುವುದಾಗಿ ಹೇಳಿಕೊಂಡಿದ್ದಾರೆ. 'ಧೂಮ್ 2' ಚಿತ್ರದಲ್ಲಿ ತಾನು ತೆಳ್ಳಗೆ ಬಳುಕುವ ಬಳ್ಳಿ ತರಹ ಇದ್ದೆ. ಈಗ ಫಿಟ್ ಅಂಡ್ ಪರ್ಫೆಕ್ಟ್ ಆಗಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)
More from Filmibeat
English summary
Bipasha Basu, who was last seen flaunting her hot body in a bikini in the 2006 released Dhoom 2 will now wear a bikini again for her forthcoming film Players.


Click it and Unblock the Notifications











