ಬಾಲಿವುಡ್ ಬಿಗ್ ಬಿ ಅಮಿತಾಬ್ ಆದ್ರು ನರ್ವಸ್
ಈಗ ಮೂಗಿನ ಮೇಲೆ ಇದೆ ನಿಮ್ಮ ಬೆರಳು. ತೆಗಿರಿ ಪರ್ವಾಗಿಲ್ಲ. ಯಾಕಂದ್ರೆ ಅವರು ನರ್ವಸ್ ಆಗಿರೋದು ಹಾಲಿವುಡ್ ಕ್ಯಾಮೆರಾ ಮುಂದೆ, ಬಾಲಿವುಡ್ ನಲ್ಲಿ ಅಲ್ಲ. ನಿಟ್ಟುಸಿರು ಬಿಟ್ಕೊಂಡು ಮುಂದಕ್ಕೆ ಓದಿ. ಬರೋಬ್ಬರಿ 120 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ದಿ ಗ್ರೇಟ್ಜ್ ಗ್ಯಾಟ್ಸ್ ಬಿ' ಚಿತ್ರದಲ್ಲಿ ಅಮಿತಾಬ್ ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಹೀಗಾಯ್ತಂತೆ.
ಅಮಿತಾಬ್ ಜೊತೆಗೆ ಇದರಲ್ಲಿ ಟೈಟಾನಿಕ್ ನಟ ಲಿಯೋನಾರ್ಡೋ ಡಿ ಕ್ಯಾಪ್ರಿಯೋ, ಸ್ಪೈಡರ್ ಮ್ಯಾನ್ ಖ್ಯಾತಿಯ ಟೋಬಿ ಮ್ಯಾಗೂರ್ ಮುಂತಾದವರಿದ್ದಾರೆ. ಅವರೆಲ್ಲರಿಗಿಂತ ಬಿಗ್ ಬಿ ತುಂಬಾ ಸೀನಿಯರ್. ಆದ್ರೆ ಇವರಿಗೆ ಇದು ಮೊದಲ ಹಾಲಿವುಡ್ ಚಿತ್ರ. ಹಾಗಾಗಿ ಆ ಅನುಭವ ಅಷ್ಟೇ.
ಆದ್ರೂ ಲೆಜೆಂಡರಿಗಳು ಹೇಗಿರ್ತಾರೆ ನೋಡಿ. ಎಷ್ಟೇ ದೊಡ್ಡವರಾಗಿದ್ರೂ ವಿನಯ, ಎನಗಿಂತ ಕಿರಿಯರಿಲ್ಲ ಅನ್ನೋ ಭಾವ ಹೊಂದಿರ್ತಾರೆ. ಜೊತೆಗೆ ಅನುಭವ ಹೇಳೋದ್ರಲ್ಲಿ ಪ್ರಾಮಾಣಿಕತೆ ಮೆರೀತಾರೆ. ಆದ್ರೆ ಈ ಚಿಕ್ಕವರಿರ್ತಾರೆ ನೋಡಿ, ಅವರ ವಿಷ್ಯ ನಮಗ್ಯಾಕೆ ಬಿಡಿ... ಒಟ್ಟಿನಲ್ಲಿ ಇದು ಬಿಗ್ ಬಿ ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದ ಕಥೆ. (ಏಜೆನ್ಸೀಸ್)


Click it and Unblock the Notifications
