ಅರ್ಜುನ್ ಸರ್ಜಾ ವಾಯುಪುತ್ರ ತೆರೆಗೆ

By Staff

ದಕ್ಷಿಣ ಭಾರತದ ಪ್ರಸಿದ್ಧ ನಟ, ಕರುನಾಡ ಕುವರ ಅರ್ಜುನ್ ಸರ್ಜಾ ನಿರ್ಮಾಣದ 'ವಾಯುಪುತ್ರ" ಇಂದು (ಸೆಪ್ಟೆಂಬರ್ 3) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಜಾ ಕುಟುಂಬದ ಮತ್ತೊಂದು ಕುಡಿ ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಹಿಂದೆ ಕೆಲವು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದ ಕಿಶೋರ್‌ಸರ್ಜಾ ಈ ಚಿತ್ರದ ನಿರ್ದೇಶಕರು. ಪ್ರಸ್ತುತ ಚಿತ್ರದ ಚಿತ್ರೀಕರಣ ಪೂರೈಸಿದ ಅವರು ನಂತರ ಇಹಲೋಕ ತ್ಯಜಿಸಿದು ಬೇಸರದ ಸಂಗತಿ. ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ 'ವಾಯುಪುತ್ರ"ಚಿತ್ರದ ಹಾಡುಗಳು ಜನ ಮನ್ನಣೆಗೆ ಪಾತ್ರವಾಗಿದೆ ಎಂದು ಆಕಾಶ್ ಆಡಿಯೋ ಸಂಸ್ಥೆ ಮಾಲೀಕರಾದ ಮಧುಬಂಗಾರಪ್ಪ ತಿಳಿಸಿದ್ದಾರೆ. ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ವಿಶಿಷ್ಟ ಕಥಾ ಹಂದರ ಹೊಂದಿದ್ದು, ನೋಡುಗರಿಗೆ ಮುದ ನೀಡಲಿದೆ ಎಂಬ ಅನಿಸಿಕೆ ಅರ್ಜುನ್‌ಸರ್ಜಾ ಅವರದು.

ಶ್ರೀ ರಾಮ ಫಿಲಂಸ್ ಪ್ರೈ(ಲಿ) ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಲಿಂಗುಸ್ವಾಮಿ ಕಥೆ ಬರೆದಿದ್ದಾರೆ. ಸುಂದರನಾಥ ಸುವರ್ಣ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಕೆ.ಕೆ ಸಂಕಲನ, ಎಂ.ಎಸ್.ರಮೇಶ್, ಕಿಶೋರ್ ಸರ್ಜಾ ಸಂಭಾಷಣೆ, ತಾರಾ-ಪ್ರಸಾದ್, ಶೀಭಿ ಪೌಲ್‌ರಾಜ್, ಇಮ್ರಾನ್ ಸರ್ದಾರಿಯಾ, ದೇವ್‌ಸಂಪತ್ ನೃತ್ಯ, ಶಿವಾರ್ಜುನ್, ಸಿ.ಎಚ್.ರಾಮಕೃಷ್ಣ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಅಂಬರೀಶ್, ಅಂದ್ರಿತಾ ರೇ, ಅಜಯ್, ಸಾಧುಕೋಕಿಲಾ, ರಮೇಶ್‌ಭಟ್, ಮೈಕೋ ನಾಗರಾಜ್, ಕೃಷ್ಣೇಗೌಡ, ಪದ್ಮಜಾರಾವ್, ಶ್ರೀಶೈಲನ್, ಸರೋಜ ಶ್ರೀಶೈಲನ್, ರಮೇಶ್ ಪಂಡಿತ್, ನಾಗರಾಜ ಮೂರ್ತಿ, ಗಣೇಶ್, ಸಾಗರ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X