ಸಿನಿಮಾ ನನ್ನ ಧರ್ಮ,ಕಮಲಹಾಸನ್
*ಜೇಕಬ್ ವರ್ಗೀಸ್, ಗೋವಾ

'ಯಾವುದನ್ನಾದರೂ ಸಾಧಿಸಲಿಕ್ಕೆ ನಾವು ಬದುಕಬೇಕು" ಎನ್ನುವ ಕಮಲಹಾಸನ್‌ರ ಮಾತಿಗೆ ಹಲವು ಅರ್ಥ. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯವರು. ಅವರ ಮಾತುಗಳಲ್ಲಿ ಸಿನಿಮಾ- ಮಾನವೀಯತೆ- ಹಿಂಸೆಯ ಕುರಿತ ಜಿಜ್ಞಾಸೆಯಿತ್ತು. 'ಸಿನಿಮಾ ನನ್ನ ಶಾಲೆ. ಅದೇ ಜಗತ್ತು. ಅದು ನನ್ನ ಧರ್ಮ. ಆ ಕಾರಣಕ್ಕೇ ಇಂಥ ಸಿನಿಮಾ ಹಬ್ಬ ಮುಖ್ಯವೆನ್ನಿಸುತ್ತದೆ. ಸಮಸ್ಯೆ, ಪ್ರಶ್ನೆಗಳು ಎಲ್ಲೆಡೆ ಇರುತ್ತವೆ. ನಾವು ಎಲ್ಲವನ್ನೂ ಬಗೆಹರಿಸಿಕೊಂಡು ನಡೆಯಬೇಕು" ಎಂದರು ಕಮಲ್.
ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಚಿತ್ರೋತ್ಸವಕ್ಕೆ ಗೋವಾ ಶಾಶ್ವತ ಸ್ಥಳವಾಗಬೇಕೆಂಬ ಹಂಬಲ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಗೋವಾ ಸರ್ಕಾರ ಸಿನಿಮಾ ತರಬೇತಿ ಸಂಸ್ಥೆ, ರವೀಂದ್ರ ಭವನದಲ್ಲಿ ಸುಸಜ್ಜಿತ ಚಿತ್ರಮಂದಿರ ನಿರ್ಮಿಸಲು ಉದ್ದೇಶಿಸಿದೆ.


Click it and Unblock the Notifications