»   »  ದರ್ಶನ್ 'ಅಭಯ್' ಚಿತ್ರೀಕರಣ ಮುಕ್ತಾಯ

ದರ್ಶನ್ 'ಅಭಯ್' ಚಿತ್ರೀಕರಣ ಮುಕ್ತಾಯ

Subscribe to Filmibeat Kannada

ಚಾಲೆಂಜಿಗ್ ಸ್ಟಾರ್ ದರ್ಶನ್ ತೂಗುದೀಪ್ ಅಭಿನಯದ 'ಅಭಯ್' ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಮೈಸೂರು, ಬೆಂಗಳೂರು, ಬ್ಯಾಂಕಾಕ್ ಮತ್ತು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಅಭಯ್ ಚಿತ್ರತಂಡ ಶೂಟಿಂಗ್ ಮುಗಿಸಿಕೊಂಡು ಬಂದಿದೆ.

ಮಹೇಶ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಅಲ್ಲದೇ ಸಂಭಾಷಣೆಯನ್ನೂ ಕೂಡಾ ಜನಾರ್ದಾನ ಮಹರ್ಷಿ ಬರೆದಿದ್ದಾರೆ. ರಮೇಶ್ ಬಾಬು ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರೆ ಹರಿಕೃಷ್ಣ ಸಂಗೀತ ನೀಡಿದ್ದಾರೆ.

ನಿತಿನ್ ಪ್ರೊಡಕ್ಶನ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಅಭಯ್ ಚಿತ್ರವನ್ನು ಬಾಬುರೆಡ್ಡಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ದರ್ಶನ್, ಆರತಿ ಠಾಕೂರ್, ಪ್ರದೀಪ್ ರಾವತ್, ಓಂ ಪ್ರಕಾಶ್ ರಾವ್, ಸಲೀಂ ಬೇಗ್, ಆರ್ಯಮಾನ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...